ಅಂಕೋಲಾದ ಬೆಳಂಬಾರ ಬಳಿಯ ಸಮುದ್ರ ತೀರದಲ್ಲಿ ಅಪರಿಚಿತ ಪುರುಷನೊಬ್ಬನ ಅರ್ಧ ಮೃತದೇಹ ಗುರುವಾರ ಪತ್ತೆಯಾಗಿದೆ. ಸೊಂಟದ ಕೆಳಭಾಗ ಮಾತ್ರ ಇದ್ದು, ಮೇಲ್ಬಾಗ ನಾಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದ ಆರು ಮಂದಿಯ ಶವ ಮಾತ್ರ ಈ ಭಾಗದಲ್ಲೇ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಪತ್ತೆಯಾಗಿರುವ ಅಪರಿಚಿತ ಶವ ಪತ್ತೆಯಾಗಿದೆ. ಪುರುಷನ ಶವ ದುರಂತದಲ್ಲಿ ಮೃತಪಟ್ಟವರದ್ದೇ ಅಥವಾ ಬೇರೆಲ್ಲಿಯೋ ಮೃತಪಟ್ಟಿದ್ದ, ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದೆಯೇ ಎಂಬುದು ಇನ್ನಷ್ಟೇ ಖಚಿತಪಡಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.