ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಪ್ರತಿಭಟಿಸುತ್ತಿರುವ ಬಿಜೆಪಿಯ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು, ಅವರಿಗೆ ಬೇಕಾದುದನ್ನು ಮಾತನಾಡಲು ಅವರಿಗೆ ಅವಕಾಶ ನೀಡಿದ್ದೇವೆ. ನಾವು ಯಾರನ್ನೂ ರಕ್ಷಿಸಲು ಬಯಸುವುದಿಲ್ಲ. ನಮಗೆ ಎಸ್ಐಟಿ ಮೇಲೆ ಸಂಪೂರ್ಣ ವಿಶ್ವಾಸವಿದೆ. ಪೊಲೀಸ್ ಅಧಿಕಾರಿಗಳು ಈಗಾಗಲೇ ಸ್ವಲ್ಪ ಹಣವನ್ನು ವಶಪಡಿಸಿಕೊಂಡಿದ್ದಾರೆ. ಹಣಕಾಸು ಸಚಿವರು ಭಾಗಿಯಾಗಿದ್ದಾರೆ ಎಂದು ಹೇಗೆ ಹೇಳಲಿ? ಸಿಎಂ ಭಾಗಿಯಾಗಿರುವುದು ಹೀಗಲೇ ಹೇಗೆ ಹೇಳೋದು ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ಆಗಿದೆ. ಅಂಬೇಡ್ಕರ್ ನಿಗಮ, ಭೋವಿ ನಿಗಮ, ದೇವರಾಜ ಅರಸು ನಿಗಮ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೆಐಎಡಿಬಿಯಲ್ಲಿ ಮೊತ್ತವನ್ನು ವರ್ಗಾಯಿಸಲಾಗಿದೆ. ಈ ಎಲ್ಲ ಹಗರಣಗಳು ಹಿಂದಿನ ಯಡಿಯೂರಪ್ಪ ಮತ್ತು ಬೊಮ್ಮಾಯಿ ಆಡಳಿತದಲ್ಲಿ ನಡೆದಿವೆ. ಅದನ್ನು ದಾಖಲೆಗೆ ತಂದು ವಿಧಾನಸಭೆಗೆ ಹೇಳಬೇಕೆಂದಿದ್ದೇವೆ. ನಾವು ಅವರನ್ನು ಬಯಲಿಗೆಳೆದು ಭ್ರಷ್ಟಾಚಾರದ ರಾಜರು ಎಂದು ಹೇಳಲು ಬಯಸುತ್ತೇವೆ. ನಾವು ಅದನ್ನು ಖಂಡಿತವಾಗಿ ಮಾಡುತ್ತೇವೆ ಎಂದರು. ನಾವು ರಾಜ್ಯದ ಜನತೆಗೆ ಹೇಳಲು ಬಯಸುತ್ತೇವೆ. ಸಿಎಂ ಆಗಲು ಕೊಟ್ಟ 2500 ಕೋಟಿ ಬಗ್ಗೆ ಯಾಕೆ ವಿಚಾರಿಸಲಿಲ್ಲ? ನಾವು ನಮ್ಮ ಕೆಲಸವನ್ನು ಮಾಡುತ್ತೇವೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇನ್ನೂ ಜಿ.ಟಿ ಮಾಲ್ ಮುಚ್ಚಿದ ವಿಚಾರಕ್ಕೆ ಮಾತನಾಡಿದ ಡಿಸಿಎಂ, ಯಾವುದೇ ಡ್ರೆಸ್ ಕೋಡ್ ಇಲ್ಲ. ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳಲಾಗುವುದು. ನನ್ನ ಕ್ಷೇತ್ರಗಳಲ್ಲಿಯೂ ಪಂಚೆಗಳನ್ನು ಧರಿಸುತ್ತಾರೆ. ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದರು. ಹಾಗೇ ಕನ್ನಡ ಪರ ಹೋರಾಟಗಾರರ ಪ್ರತಿಭಟನೆಗಳ ಕುರಿತು ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.