ಗ್ಲೋಬಲ್ ಸೈಬರ್ ಸೆಕ್ಯುರಿಟಿ ಪ್ಲಾಟ್ಫಾರ್ಮ್ ಕ್ರೌಡ್ಸ್ಟ್ರೈಕ್ ಡೌನ್ ಆಗಿದೆ ಎಂದು ಭಾರತ, ಜಪಾನ್, ಕೆನಡಾ, ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳ ಹಲವಾರು ಬಳಕೆದಾರರು ಹೇಳಿಕೊಂಡಿದ್ದಾರೆ. ಸ್ಥಗಿತವು ಬ್ಯಾಂಕ್ಗಳು, ಸೂಪರ್ಮಾರ್ಕೆಟ್ಗಳು, ಏರ್ಲೈನ್ಗಳು ಮತ್ತು ಇತರ ಪ್ರಮುಖ ಕಂಪನಿಗಳಲ್ಲಿನ ಹಲವಾರು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಸಮಸ್ಯೆ ಉಂಟಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.
ಕ್ರೌಡ್ಸ್ಟ್ರೈಕ್ ವಿಂಡೋಸ್ ಪಿಸಿಗಳಿಗೆ ಸುಧಾರಿತ ಸೈಬರ್ಸೆಕ್ಯುರಿಟಿ ಪರಿಹಾರಗಳನ್ನು ಒದಗಿಸುತ್ತದೆ, ಕ್ರೌಡ್ಸ್ಟ್ರೈಕ್ ಡೌನ್ ಹಲವಾರು ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಪ್ಲಾಟ್ಫಾರ್ಮ್ನಲ್ಲಿನ ಡೆಡ್ ಬ್ಲೂ ಸ್ಕ್ರೀನ್ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಟ್ರೆಂಡ್ ಆಗುತ್ತಿದೆ. ಈ ಬಗ್ಗೆ ಸ್ವತಃ ಮೈಕ್ರೊಸಾಫ್ಟ್ ಎಕ್ಸ್ ನಲ್ಲಿ ಮಾಹಿತಿ ತಿಳಿಸಿದೆ.