ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಹರಿಯಾಣದ ಕರ್ನಾಲ್‌ನ 26 ವರ್ಷದ ಭಾರತೀಯ ನೌಕಾಪಡೆ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಹುತಾತ್ಮರಾದರು. ಆದರೆ ಮದುವೆಯಾದ ಕೇವಲ ಏಳೇ ದಿನಗಳಲ್ಲಿ ಈ ನೌಕಾಪಡೆ ಅಧಿಕಾರಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಅವರ ಪತ್ನಿ ಹಿಮಾಂಶಿ ಸೋವಾಮಿ ಅವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿರುವ ವೇಳೆಯಲ್ಲಿಯೇ ಈ ದುರ್ಘಟನೆ ಸಂಭವಿಸಿದ್ದು, ಇದೊಂದು ಭೀಕರ ಸಂತಾಪದ ವಿಷಯವಾಗಿದೆ.
ದಾಳಿಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ನೃತ್ಯದ ವಿಡಿಯೋ ಹರಿದಾಡಿತ್ತು. ಅದರಲ್ಲಿ ಯುವ ದಂಪತಿಯೋರ್ವರು ಪಹಲ್ಗಾಮ್‌ನ ಪ್ರಕೃತಿ ಸೌಂದರ್ಯದ ನಡುವೆ ಹೆಜ್ಜೆ ಹಾಕುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನೇ ಲೆಫ್ಟಿನೆಂಟ್ ನರ್ವಾಲ್ ಮತ್ತು ಹಿಮಾಂಶಿಯ ಕೊನೆಯ ಕ್ಷಣಗಳ ಅಂತಿಮ ನೆನಪಾಗಿ ಪ್ರಕಟಿಸಲಾಗುತ್ತಿದೆ. ವಿಡಿಯೋದಲ್ಲಿ ಅವರು ಕೋಕ್ ಸ್ಟುಡಿಯೋ ಹಾಡಿಗೆ ನೃತ್ಯ ಮಾಡುತ್ತಿರುವ ದೃಶ್ಯ ಇದ್ದು, ಜನರು ಭಾವುಕವಾಗಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ಆದರೆ ಈ ವಿಡಿಯೋ ತನ್ನದು ಅಲ್ಲ ಎಂದು ಹಿಮಾಂಶಿ ಸೋವಾಮಿ ಸ್ಪಷ್ಟಪಡಿಸಿದರು. “ದಯವಿಟ್ಟು ಸುಳ್ಳು ಸುದ್ದಿ ಹರಡಬೇಡಿ. ಆ ವಿಡಿಯೋ ನಮ್ಮದಲ್ಲ ಎಂದು ಅವರು ಹೇಳಿದರು. ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಸರಿಯಾದ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.
ಈ ಮಧ್ಯೆ, ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ ದಂಪತಿಯು ದೆಹಲಿಯ ನಿವಾಸಿಗಳಾದ ಆಶಿಶ್ ಸೆಹ್ರಾವತ್ ಮತ್ತು ಯಾಶಿಕಾ ಶರ್ಮಾ ಎಂದು ಹೇಳಲಾಗಿದೆ. ಸೆಹ್ರಾವತ್ ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ದೃಶ್ಯವನ್ನು ಏಪ್ರಿಲ್ 14 ರಂದು ಪಹಲ್ಗಾಮ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. “ನಾವು ಕಾಶ್ಮೀರ ಪ್ರವಾಸದಲ್ಲಿದ್ದಾಗ ಈ ವಿಡಿಯೋ ತೆಗೆದಿದ್ದು, ನಂತರ ನಮ್ಮ ಖಾತೆಯಿಂದ ಹಂಚಿಕೊಳ್ಳಲಾಯಿತು. ಆದರೆ, ಯಾರೋ ಅದನ್ನು ಲೆಫ್ಟಿನೆಂಟ್ ನರ್ವಾಲ್ ಮತ್ತು ಅವರ ಪತ್ನಿಯ ಅಂತಿಮ ಕ್ಷಣವೆಂದು ತಪ್ಪಾಗಿ ವಿಡಿಯೋ ವೈರಲ್ ಆಗುತ್ತಿದೆ,” ಎಂದು ಅವರು ತಿಳಿಸಿದರು.
ನಾವು ಜೀವಂತವಾಗಿರುವುದನ್ನು ಸ್ಪಷ್ಟಪಡಿಸಿದ ಅವರು, “ಈ ವಿಡಿಯೋ ನಮ್ಮದೇ ಎಂಬುದನ್ನು ಈಗ ಎಲ್ಲರಿಗೂ ತಿಳಿಸಿದ್ದಾರೆ. ಆದರೆ, ಇದನ್ನು ಒಂದು ದುರ್ಘಟನೆಗೆ ತಪ್ಪಾಗಿ ಜೋಡಿಸಿ ವೈರಲ್ ಮಾಡುತ್ತಿದ್ದಾರೆ.. ಆದರೆ ಇಂತಹ ಸಮಯದಲ್ಲಿ ತಪ್ಪಾಗಿ ವಿಡಿಯೋ ವೈರಲ್ ಮಾಡುವುದು ಅತಿಯಾಗಿ ನೋವುಂಟುಮಾಡುತ್ತದೆ,” ಎಂದಿದ್ದಾರೆ.