ಮೋದಿ 3.O ಬಜೆಟ್ನಲ್ಲಿ ಮಿತ್ರ ಪಕ್ಷಗಳಿಗೆ ಭರ್ಜರಿ ಬಂಪರ್ ನೀಡಿದ್ದಾರೆ. ಎನ್ಡಿಎ ಮಿತ್ರಪಕ್ಷ ಟಿಡಿಪಿ, ಜನಸೇನಾ ಸರ್ಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ. ಆಂಧ್ರ ರಾಜಧಾನಿ ನಿರ್ಮಾಣಕ್ಕೆ ಕೇಂದ್ರದಿಂದ ಅನುದಾನ ನೀಡಲಾಗಿದ್ದು, ಆಂಧ್ರದ ಮಹತ್ವಕಾಂಕ್ಷೆ ಪೋಲಾವರಂ ಯೋಜನೆಗೆ ಒತ್ತು ಕೊಡಲಾಗಿದೆ. ಬೆಂಗಳೂರು-ಹೈದಾರಬಾದ್ ಕಾರಿಡಾರ್ಗೆ ಅನುಮೋದನೆ. ಈ ಮೂಲಕ ಆಂಧ್ರಗೆ ಬಂಪರ್ ಗಿಫ್ಟ್ ಕೊಟ್ಟ ಮೋದಿ ಸರ್ಕಾರ
ಬಿಹಾರಕ್ಕೆ ಬಜೆಟ್ನಲ್ಲಿ ವಿಶೇಷ ಅನುದಾನ ನೀಡಲಾಗಿದೆ. ಬಿಹಾರದಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣ ಘೋಷಣೆ. 26 ಸಾವಿರ ಕೋಟಿ ವೆಚ್ಚದಲ್ಲಿ ರೈಲ್ವೈ ಯೋಜನೆಗಳ ಘೋಷಣೆ. ಜೊತೆಗೆ ಬಿಹಾರಕ್ಕೆ ಮೆಡಿಕಲ್ ಕಾಲೇಜ್ ಗಿಫ್ಟ್ ನೀಡಿದ್ದಾರೆ. ಈ ಮೂಲಕ ಮಿತ್ರಪಕ್ಷಗಳಿಗೆ ಮಣೆಹಾಕಿದ ನರೇಂದ್ರ ಮೋದಿ.