ಈ ಬಾರಿಯ ಬಜೆಟ್ನಲ್ಲಿ ಕಾಶಿ ಮಾದರಿಯಲ್ಲಿ ಇತರೆ ದೇವಾಲಯಗಳ ಅಭಿವೃದ್ಧಿ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಬಜೆಟ್ನಲ್ಲಿ ಘೋಷಿಸಿದ್ದಾರೆ. ವಾರಣಾಸಿ ಕಾರಿಡಾರ್ ಮಾದರಿಯಲ್ಲೇ ಇತರೆ ದೇವಾಲಯಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ಬಜೆಟ್ನಲ್ಲಿ ಹೇಳಿದ್ದಾರೆ. ಬುದ್ಧ ಗಯಾ, ನಳಂದ ಅಭಿವೃದ್ಧಿಗೆ ಯೋಜನೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಿದ್ದಾರೆ. ಒರಿಸ್ಸಾದ ದೇವಾಲಯಗಳು, ಬೀಚ್ಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.