ಕನ್ನಡದ ಕಾಮಿಡಿ ಅಧ್ಯಕ್ಷರು, ಸೂಪರ್ ಹಿಟ್ ಸಿನಿಮಾಗಳ ವಿಕ್ಟರಿ ಹೀರೋ ಶರಣ್, ಹೀರೋ ಆಗೋಕೂ ಮೊದ್ಲು ಕನ್ನಡದ ಬೇಡಿಕೆಯ ಕಾಮಿಡಿ ನಟ, ಆದ್ರೆ ಶರಣ್ ಸಿನಿಮಾರಂಗಕ್ಕೆ ಎಂಟ್ರಿ ಕೊಡೋಕು ಮೊದ್ಲು ಕೆಲಸವಿಲ್ಲದ ಕಾಲದಲ್ಲಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ರಂತೆ. ರಂಗಭೂಮಿ ಹಿನ್ನಲೆಯ ನಟನ ಮನೆಯಲ್ಲಿ ಇದ್ದೋರಿಲ್ಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವ್ರು, ಆದರೂ ಕಷ್ಟಕಾಲದಲ್ಲಿ ಲಾರಿ ಕ್ಲೀನರ್ ಆಗಿದ್ರಂತೆ.
ಲಾರಿ ಕ್ಲೀನರ್ ಆಗಿದ್ದ ಸಮಯದಲ್ಲಿ, ಹೀಗೆ ದುಡಿದು ಒಂದೂ ಲಾರಿ ಖರೀದಿಸಬೇಕು ಅಂದ್ಕೊಂಡಿದ್ರಂತೆ, ಆದ್ರೆ ಭಗವಂತನ ಲೀಲೆ ಇವತ್ತು ಕನ್ನಡಿಗರು ಮೆಚ್ಚಿ ಬೆಳೆಸಿದ ಸೂಪರ್ ಸ್ಟಾರ್ ಆಗಿದ್ದಾರೆ. ಇದನ್ನ ಸ್ವತಃ ಶರಣ್ ಅವ್ರೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಲೈಫ್ ಹೇಗೆಲ್ಲ ಮಾಡಲಾಗುತ್ತೆ ಅನ್ನೋದಕ್ಕೆ ಇದು ಬೆಸ್ಟ್ ಉದಾಹರಣೇ ಅಲ್ವಾ?