ಜಾಲಹಳ್ಳಿ ಕ್ರಾಸ್ ಬಳಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಕಿಡ್ನಾಪ್ ಆಗಿದೆ. ಬಸ್ಗಾಗಿ ಕಾಯುತ್ತಿದ್ದ ವೇಳೆ ಅಪಹರಣಗಾರರು ಕಾರಿನಲ್ಲಿ ಹೊತ್ತೊಯ್ದಿದ್ದಾರೆ. ತುಮಕೂರಿನ ಕಾಲೇಜ್ ಒಂದರಲ್ಲಿ ವಿದ್ಯಾರ್ಥಿನಿ ಓದುತ್ತಿದ್ದಳು. ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಯಲಹಂಕದಲ್ಲಿರುವ ಮಾವನ ಮನೆಗೆ ಬಂದಿದ್ದಳು. ಇಂದು ಬೆಳಗ್ಗೆ ಕಾಲೇಜ್ಗೆ ಹೋಗುವುದಾಗಿ ಹೇಳಿ, ಬಸ್ ನಿಲ್ದಾಣದವರೆಗೆ ಮಾವನ ಬಳಿ ಡ್ರಾಪ್ ಮಾಡಿಸಿಕೊಂಡಿದ್ದಳು.
ಜಾಲಹಳ್ಳಿ ಬಳಿ ತುಮಕೂರು ಬಸ್ಗಾಗಿ ಕಾಯುತ್ತಿದ್ದಳು. ಈ ವೇಳೆ ಯುವತಿ ಬಳಿ ಇಬ್ಬರು ಯುವತಿಯರು ಬಂದಿದ್ದಾರೆ. ತಕ್ಷಣ ಯುವತಿಯ ಕೈಹಿಡಿದು ನಂತರ ಮುಖಕ್ಕೆ ಮಾಸ್ಕ್ ಹಿಡಿದಿದ್ದಾರೆ. ಆಗ ಪ್ರಜ್ಞೆತಪ್ಪಿ ಬಿದ್ದಿದ್ದಳು. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಎಚ್ಚರಗೊಂಡಾಗ ಆಕೆ ಆಘಾತಕ್ಕೆ ಒಳಗಾಗಿದ್ದಾಳೆ.
ಕಾರಿನಲ್ಲಿ ಇಬ್ಬರು ಯುವತಿಯರು ಸೇರಿ ಒಟ್ಟು ನಾಲ್ಕು ಜನ ಹುಡುಗರಿದ್ದ ಆರೋಪ ಇದೆ. ಯುವತಿಗೆ ಎಚ್ಚರವಾದಾಗ ಆರೋಪಿಗಳು ಗಾಡಿ ನಿಲ್ಲಿಸಿ ಟೀ ಕುಡಿಯುತ್ತಿದ್ದರು. ತಕ್ಷಣ ಕಾರಿನ ಡೋರ್ ಓಪನ್ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾಳೆ. ಬಳಿಕ ಆರೋಪಿಗಳು ವಿದ್ಯಾರ್ಥಿನಿಯನ್ನ ಹಿಂಬಾಲಿಸಿಕೊಂಡು ಬಂದಿದ್ದಾರೆ. ಕೊನೆಗೆ ಯುವತಿ ಸ್ಥಳೀಯರ ಬಳಿ ಇದು ಯಾವ ಊರು ಎಂದು ಕೇಳಿದ್ದಾಳೆ. ಸ್ಥಳೀಯರು ಇದು ಮೈಸೂರು ಎಂದು ತಿಳಿಸಿದ್ದಾರೆ. ಕೊನೆಗೆ ನಡೆದ ವಿಚಾರ ತಿಳಿಸಿದಾಗ ಅಲ್ಲಿದ್ದ ಸ್ಥಳೀಯರು ಸಹಾಯ ಮಾಡಿದ್ದಾರೆ.
ಮೈಸೂರು ಬಸ್ ನಿಲ್ದಾಣಕ್ಕೆ ಬಂದ ನಂತರ ಯುವತಿ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ನಂತರ ಕುಟುಂಬಸ್ಥರ ಸಹಾಯದಿಂದ ಮೈಸೂರು ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರಿನ ಅನ್ವಯ ಮೈಸೂರಿನ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿದ್ಯಾರ್ಥಿನಿ ಜಾಲಹಳ್ಳಿ ಕ್ರಾಸ್ ನಿಂದ ಕಿಡ್ನಾಪ್ ಆದ ಹಿನ್ನೆಲೆ ಪ್ರಕರಣವನ್ನು ಪೀಣ್ಯ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸ್ತಿದ್ದಾರೆ.