ಈ ಬಾರಿ ಒಲಿಂಪಿಕ್ಸ್ನಲ್ಲಿ ಕರ್ನಾಟಕದ 8 ಮಂದಿ ಸ್ಪರ್ಧಿಸಲಿದ್ದಾರೆ. ಟೆನಿಸ್ನಲ್ಲಿ ರೋಹನ್ ಬೋಪಣ್ಣ ಅವರು ಪುರುಷರ ಡಬಲ್ಸ್ನಲ್ಲಿ ಚೆನ್ನೈನ ಶ್ರೀರಾಮ್ ಬಾಲಾಜಿ ಜೊತೆಗೂಡಿ ಕಣಕ್ಕಿಳಿದಿದ್ದು, ಈಜು ಸ್ಪರ್ಧೆಯಲ್ಲಿ ಧಿನಿಧಿ ದೇಸಿಂಘು ಹಾಗೂ ಶ್ರೀಹರಿ ನಟರಾಜ್ ಸ್ಪರ್ಧಿಸುತ್ತಿದ್ದಾರೆ. ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ, ಅಥ್ಲೆಟಿಕ್ಸ್ನಲ್ಲಿ ಎಂ.ಆರ್.ಪೂವಮ್ಮ ಹಾಗೂ ಮಿಜೊ ಚಾಕೊ ಕುರಿಯನ್, ಟೇಬಲ್ ಟೆನಿಸ್ನಲ್ಲಿ ಅರ್ಚನಾ ಕಾಮತ್, ಗಾಲ್ನಲ್ಲಿ ಅದಿತಿ ಅಶೋಕ್ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಈ ಪೈಕಿ ಬೋಪಣ್ಣ ಹಾಗೂ ಅದಿತಿ ಅಶೋಕ್ ಪದಕ ಗೆಲ್ಲುವ ನೆಚ್ಚಿನ ಅಥ್ಲೆಟ್ಗಳು ಎನಿಸಿಕೊಂಡಿದ್ದು, ಒಲಿಂಪಿಕ್ಸ್ನಲ್ಲಿ ಕರ್ನಾಟಕದ ವೈಯಕ್ತಿಕ ಪದಕ ಬರ ನೀಗಿಸುವ ಕಾತರದಲ್ಲಿದ್ದಾರೆ.