ಕಲಬುರಗಿ ಜಿಲ್ಲೆಯ ಲಿಂಗಸೂರಿನ ಹಂಚಿನಾಳ ಗ್ರಾಮದಲ್ಲಿ ನಡೆದಿರುವ ಘಟನೆ 8 ತಿಂಗಳ ಬಳಿಕ ಬೆಳಕಿಗೆ ಬಂದಿದೆ. ತನ್ನ ಮಗಳು ಅನ್ಯಜಾತಿಯ ಯುವಕನೊಂದಿಗೆ ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ತಂದೆ, ತನ್ನ ಮಗಳನ್ನು ಕೊಂದು ಶವವನ್ನು ನದಿಗೆ ಎಸೆದಿದ್ದಾನೆ.
ಹಂಚಿನಾಳ ಗ್ರಾಮದ ನಿವಾಸಿ ಲಕ್ಕಪ್ಪ ಕಂಬಳಿ ಎಂಬುವವನು ತನ್ನ 17 ವರ್ಷದ ಅಪ್ರಾಪ್ತ ಮಗಳು ರೇಣುಕಾ, ಅದೇ ಗ್ರಾಮದ ಹನುಮಂತ ಎಂಬ ಯುವಕನನ್ನು ಪ್ರೀತಿಸುತ್ತಿದ್ದದನ್ನು ತಿಳಿದು ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಫೋಕ್ಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ವಿವರ
ಯುವತಿ ರೇಣುಕಾ ಮತ್ತು ಹನುಮಂತ ಅನ್ಯ ಜಾತಿಯವರಾಗಿದ್ದರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧವನ್ನು ತಂದೆ ಲಕ್ಕಪ್ಪ ಒಪ್ಪಿಕೊಳ್ಳಲಿಲ್ಲ. ಮಗಳನ್ನು ಹಲವು ಬಾರಿ ಬುದ್ಧಿಮಾತು ಹೇಳಿದರೂ ರೇಣುಕಾ ತನ್ನ ಪ್ರೀತಿಯನ್ನು ತ್ಯಜಿಸಲು ನಿರಾಕರಿಸಿದ್ದಳು. ಈ ಕಾರಣದಿಂದಾಗಿ ಮನೆಯಲ್ಲಿ ಒತ್ತಡ ಏರುತ್ತಿದ್ದರು. ಒಮ್ಮೆ ರೇಣುಕಾ ಪ್ರೀತಿಗಾಗಿ ಮನೆ ಬಿಟ್ಟು ಹೋದಳು. ತಕ್ಷಣ ಲಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದು, ಕೆಲ ದಿನಗಳಲ್ಲಿ ಪೊಲೀಸರು ಮಗಳನ್ನು ಪತ್ತೆಹಚ್ಚಿ ಮನೆಗೆ ಹಿಂತಿರುಗಿಸಿದ್ದರು.
ಆದರೆ, ಮನೆಗೆ ಬಂದ ಬಳಿಕವೂ ರೇಣುಕಾ ತನ್ನ ನಿರ್ಧಾರವನ್ನು ಬದಲಾಯಿಸಿಲ್ಲ. ತನ್ನ 18ನೇ ವರ್ಷದ ಹುಟ್ಟುಹಬ್ಬದ ನಂತರ ತಕ್ಷಣವೇ ಹನುಮಂತನೊಂದಿಗೆ ಹೋಗುವುದಾಗಿ ಮನೆಯವರಿಗೆ ಎಚ್ಚರಿಸಿತ್ತಿದ್ದಳು.
ಅಂದು ದಿನ, ರೇಣುಕಾ ತನ್ನ ಪ್ರೀತಿಯ ಕುರಿತಾಗಿ ಪುನಃ ಮನೆಯಲ್ಲಿ ವಾದಿಸಿದ ಬಳಿಕ, ಆತಂಕಗೊಂಡ ತಂದೆ ಲಕ್ಕಪ್ಪ ಆಕೆಯನ್ನು ಕೊಲೆ ಮಾಡಿ ಶವವನ್ನು ಹತ್ತಿರದ ನದಿಗೆ ಎಸೆದಿದ್ದಾನೆ ಎನ್ನಲಾಗುತ್ತಿದೆ.
ಈ ಪ್ರಕರಣದ ಬಗ್ಗೆ ಕೆಲ ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿತ್ತು. ತನಿಖೆಯನ್ನು ನವೀಕರಿಸಿ, ಪುನರ್ ವಿಚಾರಣೆ ನಡೆಸಿದಾಗ, ಲಕ್ಕಪ್ಪನ ಮೇಲಿನ ಶಂಕೆಗಳು ದೃಢಪಟ್ಟವು. ಸದ್ಯ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಮತ್ತು ತನಿಖೆ ಮುಂದುವರಿಸುತ್ತಿದ್ದಾರೆ.