ಬೆಂಗಳೂರು ನಗರಾದ್ಯಂತ ಸುಮಾರು 73 ಕಿಲೋ ಮೀಟರ್ ಜಾಲ ವ್ಯಾಪಿಸಿಕೊಂಡಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಅಧಿಕ ಆದಾಯ ಗಳಿಸಿದೆ. ಇದಕ್ಕೆ ದೈನಂದಿನ ಪ್ರಮಾಣಿಕ ಸಂಖ್ಯೆಯಲ್ಲ ಉಂಟಾದ ಹೆಚ್ಚಳವೇ ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಎಂಆರ್ಸಿಎಲ್ ನೀಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ತಿಂಗಳು ಜೂನ್ನಲ್ಲಿ ಸರಾಸರಿ ದೈನಂದಿನ ಪ್ರಮಾಣಿಕರಿಗಿಂತ ಹೆಚ್ಚು ಜನರು ಮೆಟ್ರೋ ರೈಲಿನಲ್ಲಿ ಸಂಚರಿಸಿದ್ದಾರೆ. ನಿರೀಕ್ಷೆಯ ಪ್ರಯಾಣಿಕ ಓಡಾಟ ಕಂಡುಬಂದಿದೆ. ಈ ಮೂಲಕ ನಮ್ಮ ಮೇಟ್ರೋ ಕಳೆದ ಎಲ್ಲಾ ಸಲಕ್ಕಿಂತಲೂ ಈ ಭಾರಿ ಹೆಚ್ಚು ಸರಾಸರಿ ದೈನಂದಿನ ಪ್ರಮಾಣಿಕರನ್ನು ದಾಖಲಿಸಿದೆ.
ಕಳೆದ ಜೂನ್ನಲ್ಲಿ ಸರಾಸರಿ 7,45,659 ಮಂದಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಇದರಿಂದಾಗಿ ಮೆಟ್ರೋ ನಿಗಮಕ್ಕೆ ಒಟ್ಟು ಆದಾಯ 58. 23 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಇನ್ನೂ ಒಂದು ದಿನದಲ್ಲಿ ಪ್ರಯಾಣಿಸಿದ ಗರಿಷ್ಠ ಪ್ರಯಾಣಿಕರ ಸಂಖ್ಯೆ ನೋವುದಾದರೆ, ಕಳೆದ ಜೂನ್ 19 ರಂದು ಒಂದು ದಿನ 8,08,071 ಮಂದಿ ಮೆಟ್ರೋ ಬಳಕೆ ಮಾಡಿದ್ದಾರೆ. ಇದರಿಂದಾಗಿ ಅಂದು ನಿಗಮಕ್ಕೆ 2.51 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಈ ಮೂಲಕ ನೇರಳೆ ಮಾರ್ಗವನ್ನು ಸಂಪೂರ್ಣವಾಗಿ ತೆರೆದ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಬಿಎಂಆರ್ಸಿಎಲ್ ನಿರೀಕ್ಷೆ ಹುಸಿಯಾಗಿಲ್ಲ ಎನ್ನಬಹುದು.