‘ಪ್ಯಾರಿಸ್ ಒಲಿಂಪಿಕ್ 2024’ ಆರಂಭವಾಗಿದೆ. ಪ್ಯಾರಿಸ್ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸುತ್ತಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಜೊತೆ ಸೌತ್ ಸೂಪರ್ ಸ್ಟಾರ್ ರಾಮ್ಚರಣ್ ಗುಣಮಟ್ಟದ ಸಮಯ ಕಳೆದಿದ್ದು, ಪತ್ನಿ ಉಪಾಸನಾ ತಮ್ಮ ಅಧಿಕೃತ ಸೋಷಿಯಲ್ ಮಿಡಿಯಾದಲ್ಲಿ ಫೋಟೋ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಫ್ರಾನ್ಸ್ನಲ್ಲಿ ಶನಿವಾರ ‘ಪ್ಯಾರಿಸ್ ಒಲಿಂಪಿಕ್ 2024’ ಶುರುವಾಗಿದೆ. ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸಲು ಟಾಲಿವುಡ್ನ ಮೆಗಾಸ್ಟಾರ್ ಚಿರಂಚೀವಿ ಕುಟುಂಬ ಸಾಗರೋತ್ತರ ಪ್ರದೇಶಕ್ಕೆ ತೆರಳಿದೆ. ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಫೋಟೋ ವಿಡಿಯೋಗಳನ್ನು ಶೇರ್ ಮಾಡೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಅವರ ಪತ್ನಿ – ಉದ್ಯಮಿ ಉಪಾಸನಾ, ರಾಮ್ ಅವರ ತಂದೆ-ನಟ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಅವರು ಒಲಂಪಿಕ್ ಕ್ರೀಡೆಗಳನ್ನು ವೀಕ್ಷಿಸುವ ಸಲುವಾಗಿ ಪ್ಯಾರಿಸ್ನಲ್ಲಿದ್ದಾರೆ. ಲೇಟೆಸ್ಟ್ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಆರ್ಆರ್ಆರ್ ಸ್ಟಾರ್ ರಾಮ್ಚರನ್ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಅವರ ಮುದ್ದಿನ ರೈಮ್ ಕೂಡ ಇದೆ. ಒಂದಿಷ್ಟು ಕಿರು ವಿಡಿಯೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
https://www.instagram.com/reel/C99fuSuNEiV/?utm_source=ig_web_copy_link
ವಿಡಿಯೋಗಳಲ್ಲಿ ಪ್ಯಾರಿಸ್ನ ರಸ್ತೆಗಳಲ್ಲಿ ಪಿ.ವಿ ಸಿಂಧು ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಸಿಂಧು ರೈಮ್ ಜೊತೆ ಆಟವಾಡುವುದನ್ನು ಕಾಣಬಹುದು. ತಮ್ಮದೇ ವಿಭಿನ್ನ ಕ್ಷೇತ್ರಗಳಲ್ಲಿ ಹೆಸರು ಸಂಪಾದಿಸಿರುವ ರಾಮ್ ಮತ್ತು ಸಿಂಧು ಒಂದೊಳ್ಳೆ ಕ್ಷಣ ಕಳೆದಿದ್ದು, ಉಪಾಸನಾ ಹೆಚ್ಚಿನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.ಜೊತೆಗೆ ಪಿ.ವಿ ಸಿಂಧು ಅಕ್ಕಾ, ನೀವು ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೀರಿ, ಆಲ್ ದಿ ಬೆಸ್ಟ್ ಎಂದು ಬರೆಯಲಾಗಿದೆ. ಮತ್ತೊಂದೆಡೆ ಉಪಾಸನಾ, ಪ್ಯಾರಿಸ್ ಒಲಿಂಪಿಕ್ನ ಹಲವು ಫೋಟೋ ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.