ಕೇರಳದ ವಯನಾಡಿನಲ್ಲಿ ಭೀಕರ ಗುಡ್ಡ ಕುಸಿತದ ತೀವ್ರತೆಗೆ 60 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಲೇ ಇದೇ. ಸುಮಾರು 400ಕ್ಕೂ ಹೆಚ್ಚಿನ ಜನ ನಾಪತ್ತೆಯಾಗಿದ್ದಾರೆ. ನೂರಾರು ಮನೆಗಳು ಜಲಸಮಾಧಿಯಾಗಿವೆ. 4 ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ. ಇನ್ನೂ ಕೇರಳದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಗ್ರಾಮಗಳಿಗೆ ತೆರಳಲು ಸಂಪರ್ಕ ಮಾರ್ಗಗಳೂ ಸಹ ಇಲ್ಲದಂತಾದ ಸ್ಥಿತಿ ಎದುರಾಗಿದೆ.