ಪ್ಯಾರಿಸ್ ಒಲಿಂಪಿಕ್ಸ್ನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್ ಜೊತೆಗೂಡಿ ಕಂಚಿನ ಪದಕ ಗೆದ್ದಿರುವ ಸ್ವಪ್ನಿಲ್ ಕುಸಾಲೆ ಅವರಿಗೆ ಭಾರತೀಯ ರೈಲ್ವೇ ಇಲಾಖೆ ಹುದ್ದೆಯಲ್ಲಿ ಭಡ್ತಿ ನೀಡುವುದಾಗಿ ಘೋಷಿಸಿದೆ. ಕುಸಾಲೆ 2015ರಿಂದಲೂ ರೈಲ್ವೇ ಇಲಾಖೆಯ ಟಿಕೆಟ್ ಕಲೆಕ್ಟರ್ ಹುದ್ದೆ ಹೊಂದಿದ್ದಾರೆ. ಕಳೆದ 9 ವರ್ಷಗಳಿಂದ ಅವರಿಗೆ ಯಾವುದೇ ಭಡ್ತಿ ಸಿಕ್ಕಿರಲಿಲ್ಲ. ಆದರೆ ಪ್ಯಾರಿಸ್ ಕ್ರೀಡಾಕೂಟದಲ್ಲಿ ಪದಕ ಸಾಧನೆ ಮಾಡಿದ ಮೇಲೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆ, ಸ್ವಪ್ನಿಲ್ ಕುಸಾಲೆಗೆ ಮುಂಬಡ್ತಿ ನೀಡುವುದಾಗಿ ಘೋಷಿಸಿದೆ. ದೇಶಕ್ಕೆ ಹಾಗೂ ರೈಲ್ವೇ ಇಲಾಖೆಗೆ ಕೀರ್ತಿ ತಂದ ಕಾರಣ ಟಿಸಿ ಹುದ್ದೆಯಿಂದ ಬಡ್ತಿ ನೀಡಿದ್ದು, ʻಆಫೀಸರ್ ಆನ್ ಸ್ಪೆಷಲ್ ಡ್ಯೂಟಿʼ ಅಂದರೆ ಒಎಸ್ಡಿ ಆಗಿ ನೇಮಿಸಲಾಗುವುದು ಎಂದು ರೈಲ್ವೇ ಇಲಾಖೆ ತಿಳಿಸಿದೆ.