ಎಂಎಸ್ ಧೋನಿ 18ನೇ ಐಪಿಎಲ್ ಆಡ್ತಾರಾ, ಇಲ್ವೋ ಅನ್ನೋದು ಸಸ್ಪೆನ್ಸ್ ಆಗಿದೆ. ಚಾಂಪಿಯನ್ ಕ್ಯಾಪ್ಟನ್ನ ಉಳಿಸಿಕೊಳ್ಳಲು CSK ಇನ್ನಿಲ್ಲದ ಸರ್ಕಸ್ ನಡೆಸ್ತಿದೆ. ಅದಕ್ಕಾಗಿ ಯೆಲ್ಲೋ ಆರ್ಮಿ ಹೊಸ ದಾಳ ಉರುಳಿಸಿದೆ. ಈ ದಾಳದಿಂದ ಹಲವು ಫ್ರಾಂಚೈಸಿಗಳ ಕಣ್ಣು ಕೆಂಪಾಗಿದೆ.
ಎಮ್ಎಸ್ ಧೋನಿ..! ಕ್ಯಾಪ್ಟನ್ಸ್ ಆಫ್ ಕ್ಯಾಪ್ಟನ್. ತಂತ್ರಗಳ ನಿಪುಣ. ಈ ಜೀನಿಯಸ್ ಕ್ರಿಕೆಟರ್ ಐಪಿಎಲ್ ಭವಿಷ್ಯವೇನು ಅನ್ನೋದು ಎಲ್ಲರನ್ನ ಕಾಡ್ತಿದೆ. 18ನೇ ಐಪಿಎಲ್ ಸೀಸನ್ನಲ್ಲಿ ತಲಾ ಧೋನಿ ಆಡ್ತಾರಾ ಅಥವಾ ಇಲ್ಲ ಅನ್ನೋದಕ್ಕೆ ಕ್ಲಾರಿಟಿ ಸಿಕ್ಕಿಲ್ಲ. ಆಡಬೇಕೆಂದು ಅಭಿಮಾನಿಗಳ ಭಕ್ತವರ್ಗ ಕಾಯ್ತಿದೆ. ಅತ್ತ ಸಿಎಸ್ಕೆ ಫ್ರಾಂಚೈಸಿ ಕೂಡ ಮಾಜಿ ನಾಯಕನನ್ನ ಉಳಿಸಿಕೊಳ್ಳಲೇಕೆಂದು ನಿಶ್ಚಯಿಸಿದ್ದು, ಅದಕ್ಕಾಗಿ ಹೊಸ ಸ್ಟ್ರಾಟಜಿ ರೂಪಿಸಿದೆ.
ಇತ್ತೀಚೆಗಷ್ಟೇ ಮುಂಬೈನಲ್ಲಿ ಬಿಸಿಸಿಐ, ಐಪಿಎಲ್ ಫ್ರಾಂಚೈಸಿಗಳ ಜೊತೆ ಮೀಟಿಂಗ್ ನಡೆಸಿತ್ತು. ಇದೇ ಸಭೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನ್ಕ್ಯಾಪ್ಡ್ ಪ್ಲೇಯರ್ ರೂಲ್ಗೆ ಡಿಮ್ಯಾಂಡ್ ಇಟ್ಟಿದೆ. ದಿ ಗ್ರೇಟ್ ಮಾಹಿಯನ್ನ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ.
ಆಟಗಾರರ ರಿಟೆನ್ಷನ್ನಲ್ಲಿ ಚೆನ್ನೈ ತಂಡ ಧೋನಿಯನ್ನ ಉಳಿಸಿಕೊಳ್ಳುವುದು ಕಷ್ಟ ಎಂದು ಹೇಳಲಾಗ್ತಿದೆ. ರಿಟೇನ್ ಪ್ಲೇಯರ್ಸ್ ಹೆಚ್ಚಳ ಡಿಮ್ಯಾಂಡ್ ಬಿಸಿಸಿಐ ಕೋರ್ಟ್ನಲ್ಲಿದೆ. ಒಂದು ವೇಳೆ ನಾಲ್ಕಕ್ಕಿಂತ ಹೆಚ್ಚಿನ ಪ್ಲೇಯರ್ಸ್ ಉಳಿಸಿಕೊಳ್ಳಲು ಬಿಸಿಸಿಐ ಅಸ್ತ್ರು ಎನ್ನದಿದ್ರೆ, ಮಾಹಿ 18ನೇ ಐಪಿಎಲ್ಗೆ ಗುಡ್ಬೈ ಹೇಳಬಹುದು. ಇದರಿಂದ ಸಿಎಸ್ಕೆ ತಂಡಕ್ಕೆ ದೊಡ್ಡ ಲಾಸ್ ಆಗಲಿದೆ. ಇದನ್ನರಿತ ಚೆನ್ನೈ ಫ್ರಾಂಚೈಸಿ ಹಳೆಯ ಅನ್ಕ್ಯಾಪ್ಡ್ ಪ್ಲೇಯರ್ ರೂಲ್ನ ಮತ್ತೆ ಜಾರಿಗೊಳಿಸುವಂತೆ ಬಿಸಿಸಿಐಗೆ ಮನವಿ ಮಾಡಿದೆ.