ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ಕುಸ್ತಿಯಲ್ಲಿ ಸೆಮಿಫೈನಲ್ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಕ್ರೇನ್ನ ಒಕ್ಸಾನಾ ಲಿವೀಚ್ ಎದುರು ಅಮೋಘ ಪ್ರದರ್ಶನ ತೋರಿದ ವಿನೇಶ್ 7-5 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ವಿನೇಶ್ ಫೋಗಟ್ ಇನ್ನೊಂದು ಗೆಲುವು ಭಾರತಕ್ಕೆ ಕನಿಷ್ಠ ಬೆಳ್ಳಿ ಹಾಗೂ ಗರಿಷ್ಠ ಚಿನ್ನದ ಪದಕ ತಮ್ಮದಾಗಿಸಿಕೊಳ್ಳಲಿದ್ದಾರೆ.
ಅಂದಹಾಗೆ ವಿನೇಶ್ ಫೋಗಾಟ್ ಕಳೆದೊಂದು ವರ್ಷದಿಂದಲೂ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ಭೂಷಣ್ ಸಿಂಗ್ ವಿರುದ್ದ ಬೀದಿಗಿಳಿದು ಹೋರಾಟ ಮಾಡಿದ್ದರು. ಪೊಲೀಸರ ಲಾಠಿ ಏಟು ತಿಂದರೂ ಜಗ್ಗದೇ ಹೋರಾಡಿದ್ದ ವಿನೇಶ್ ಮೇಲೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮೊದಲ ಪಂದ್ಯದಲ್ಲೇ ಎದುರಾಗಿದ್ದು ಯ್ಯೂ ಸುಸುಕಿ ಎನ್ನುವ ದೈತ್ಯ ಪ್ರತಿಭೆ. ಪಂದ್ಯ ಆರಂಭಕ್ಕೂ ಮುನ್ನವೇ ಯ್ಯೂ ಸುಸುಕಿ ಗೆಲ್ಲುವ ಹಾಟ್ ಫೇವರೇಟ್ ಎನಿಸಿಕೊಂಡಿದ್ದರು. ಯಾಕೆಂದರೆ ಯ್ಯೂ ಸುಸುಕಿ ಕುಸ್ತಿ ವೃತ್ತಿಜೀವನದಲ್ಲಿ ಇದುವರೆಗೂ ಒಂದೇ ಒಂದು ಸೋಲು ಕಂಡಿರಲಿಲ್ಲ.