ಎರಡು ದಿನಗಳ ಕಾಲ ಫಿಜಿ ಪ್ರವಾಸದಲ್ಲಿರುವ ಭಾರತದ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಫಿಜಿ ಸರ್ಕಾರ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಫಿಜಿ ಅಧ್ಯಕ್ಷರು ವಿಲಿಯಮ್ ಕಟೋನಿವರ್ ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಮುರ್ಮು ಅವರಿಗೆ ʻಆಫ್ ದಿ ಆರ್ಡರ್ ಫಿಜಿʼ ಗೌರವ ಪ್ರಧಾನ ಮಾಡಿದರು. ಈ ವೇಳೆ ಮಾತನಾಡಿದ ಮುರ್ಮು, ಫಿಜಿಯನ್ನು ಸಧೃಡ ದೇಶವನ್ನಾಗಿ ಬಲಪಡಿಸಲು ಭಾರತವು ಬೆಂಬಲ ನೀಡುತ್ತದೆ’ ಎಂದರು. ಅಲ್ಲದೇ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಶ್ಲಾಘಿಸಿದರು.