ಫಿಜಿ ದೇಶಕ್ಕೆ ತೆರಳಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಡಿ ಪ್ರದೇಶದಲ್ಲಿರುವ ಪುರಾತನ ದೇವಾಲಯ ಶ್ರೀ ಶಿವ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇಗುಲಕ್ಕೆ ಭೇಟಿ ನೀಡುವ ಮೊದಲು ಫಿಜಿಯಲ್ಲಿರುವ ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಿದ ಮುರ್ಮು, ಈ ದ್ವೀಪ ರಾಷ್ಟ್ರದಲ್ಲಿರುವ ಭಾರತೀಯ ಸಮುದಾಯಗಖ ಪಾತ್ರ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು. ವಿದೇಶಗಳಿಗೆ ಬೇಟಿಯಿತ್ತಾಗ ಭಾರತೀಯ ಮೂಲದವರನ್ನು ಭೇಟಿಯಾಗುದು ವಿಶೇಷ ಅನುಭವವನ್ನು ನೀಡುತ್ತದೆ. ಭಾರತ ಮತ್ತು ಫಿಜಿ ದೇಶದ ನಂಟು 145 ವರ್ಷಗಳಷ್ಟು ಹಳೆಯದು. ಈ ಜಾಗದಲ್ಲಿ ಭಾರತೀಯರನ್ನು ಬೇಟಿಯಾಗುತ್ತಿರುವುದು ಖುಷಿ ನೀಡಿದೆ ಎಂದಿದ್ದಾರೆ.