ಭಾರತ ವಿರುದ್ಧ ಹಾಗೂ ಅದಾನಿ ಬೆನ್ನಿಗೆ ಬಿದ್ದ ಯುಎಸ್ ಮೂಲದ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆ, ಇದೀಗ ಭಾರತಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್ ಕಾದಿದೆ ಎಂಬ ರೀತಿಯಲ್ಲಿ ಎಕ್ಸ್ ಟ್ವೀಟ್ ಮಾಡಿದೆ. ಯುಎಸ್ ಮೂಲದ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆ, ಎಕ್ಸ್ನಲ್ಲಿ ಟ್ವೀಟ್ವೊಂದನ್ನು ಹಂಚಿಕೊಂಡಿದೆ.
Something big soon India (ಸದ್ಯದಲ್ಲಿಯೇ ಭಾರತದಲ್ಲಿ ಮತ್ತೊಂದು ದೊಡ್ಡದು ನಡೆಯಲಿದೆ) ಎಂಬ ಸೂಚನೆಯೊಂದನ್ನು ನೀಡಿದೆ. ಇನ್ನು ಈ ಟ್ವೀಟ್ ಎಲ್ಲ ಕಡೆ ಭಾರೀ ವೈರಲ್ ಆಗುತ್ತಿದ್ದು, ಚರ್ಚೆ ಕೂಡ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಟ್ರೆಂಡ್ ಆಗುತ್ತಿದೆ. ಹಿಂಡೆನ್ಬರ್ಗ್ ಈ ಹಿಂದೆ ಭಾರತ ಮೇಲೆ ಇಂತಹ ಸಂಶೋಧನೆಯನ್ನು ಮಾಡಿ ಕೈಸುಟ್ಟುಕೊಂಡಿತ್ತು. ಇದೀಗ ಮತ್ತೆ ಭಾರತಕ್ಕೆ ಏನೋ ಕಾದಿದೆ ಎಂಬಂತೆ ಪೋಸ್ಟ್ ಮಾಡಿದೆ.