ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಬಳಿ ಭತ್ತದ ನಾಟಿ ಮಾಡಿದರು. ಶನಿವಾರ ಸ್ಥಳವನ್ನು ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು ಅವರು ಭೇಟಿ ನೀಡಿ ಅಂತಿಮ ಸಿದ್ಧತೆಯನ್ನು ಪರಿಶೀಲಿಸಿದ್ದರು.
ಮಧುವಣಗಿತ್ತಿಯಂತೆ ಶೃಂಗಾರ ಗೊಂಡಿರುವ ಲಕ್ಷಣ್ ಎನ್ನುವರ ಜಮೀನು (ಗದ್ದೆ ) ಸಿಂಗಾರ ಗೊಂಡಿದೆ. ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ 2018ರಲ್ಲಿ ಸೀತಪುರ ಗ್ರಾಮದಲ್ಲಿ ಬತ್ತದ ನಾಟಿ ಮಾಡುವ ಮೂಲಕ ರೈತರ ಮುಖದಲ್ಲಿ ಸಂತಸದ ಮೂಡಿಸಿದ್ದರು.