ನಟಿ ಶೋಭಿತಾ ಧುಲಿಪಾಲ ಹಾಗೂ ನಟ ನಾಗಚೈತನ್ಯ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರವೇ ಮದುವೆಯೂ ಆಗಲಿದ್ದಾರೆ.
ಶೋಭಿತಾ ಧುಲಿಪಾಲ ವೃತ್ತಿ ಜೀವನ ಆರಂಭವಾಗಿ ಬಹಳ ವರ್ಷಗಳಾಗಿರಲಿಲ್ಲ. ಇತ್ತೀಚೆಗೆ ಅವರಿಗೆ ಹೆಚ್ಚಿನ ಅವಕಾಶ ಬರಿತ್ತಿದ್ದವು.
ಇತ್ತೀಚೆಗೆ ಹಾಲಿವುಡ್ ಸಿನಿಮಾ ಒಂದರಲ್ಲಿ ಶೋಭಿತಾ ನಟಿಸಿದ್ದರು. ಹಿಂದಿ ಸಿನಿಮಾಲ್ಲಿ ನಟಿಸುತ್ತಿದ್ದಾರೆ. ಇದೀಗ ಮದುವೆಯ ಬಳಿಕ ಶೋಭೊತಾ ಧುಲಿಪಾಲ ಸಿನಿಮಾ ರಂಗದಿಂದ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮದುವೆಯ ನಂತರ ಸಮಂತಾ ಸಿನಿಮಾಗಳಲ್ಲಿ ನಟಿಸಿದ್ದಾದರೂ ಕೂಡ , ಸಿನಿಮಾ ಆಯ್ಕೆಯ ವಿಷಯಕ್ಕೆ ಸಮಂತಾ ಹಾಗೂ ನಾಗಚೈತನ್ಯ ನಡುವೆ ಭಿನ್ನಾಭಿಪ್ರಾಯ ಬಂದಿತ್ತು ಎನ್ನಲಾಗಿದೆ.
ಇದೇ ಕಾರಣಕ್ಕೆ ಶೋಭಿತಾ, ನಾಗ ಚೈತನ್ಯರನ್ನು ವಿವಾಹವಾದ ಬಳಿಕ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗಿದೆ. ಶೋಭಿತಾ ನಟನೆಯ ಖಾಲಕಂಡಿ, ಕುರುಪ್, ಗೂಢಚಾರಿ,ಮೇಜರ್, ಪೊನ್ನಿಯಿನ್ ಸೆಲ್ವನ್, ಹಾಲಿವುಡ್ನ ಮಂಕಿ ಮ್ಯಾನ್ ಸಿನಿಮಾಗಳಲ್ಲಿ ಶೋಭಿತಾ ನಟಿಸಿದ್ದಾರೆ.