ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದ್ದಕ್ಕೆ ಕನ್ನಡ ಚಳುವಳಿ ವಾಟಳ್ ನಾಗರಾಜ್ ತೀವ್ರ ಆಕ್ರೋಶ ವ್ಯಕ್ತ ಪಡೆಸಿದ್ದಾರೆ. ರಾಜ್ಯಪಾಲರ ನಡೆ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕಪ್ಪು ಪಟ್ಟಿ ಧರಿಸಿ ರಾಜ್ಯಪಾಲರ ನಿರ್ಣಯದ ವಿರುದ್ಧ ಅವರ ನಡೆ ಇಡೀ ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆ. ರಾಜ್ಯಪಾಲರು ಸಂವಿಧಾನ ಉಳಿಸುವ ಕೆಲಸ ಮಾಡಬೇಕು ಆದರೆ ಇಲ್ಲಿ ರಾಜಕೀಯ ಮಾಡೋಕೆ ರಾಜ್ಯಪಾಲರು ಹೊರಟಿದ್ದಾರೆ. ಯಾವುದೇ ಸರ್ಕಾರಗಳನ್ನು ತೆಗೆಯೋದು , ಸಿಎಂ ಗಳನ್ನು ಉರಳಿಸೋದು ರಾಜ್ಯಪಾಲರ ಕೆಲಸ ಅಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.