ಆಹಾರ ವಿತರಣಾ ಕಂಪನಿ ಝೋಮ್ಯಾಟೋ ಡಿಜಿಟಲ್ ಪಾವತಿ ಸಂಸ್ಥೆಯಾದ ಪೇಟಿಎಂನ ಚಲನಚಿತ್ರ ಮತ್ತು ಈವೆಂಟ್ಗಳ ಟಿಕೆಟಿಂಗ್ ವ್ಯವಹಾರಗಳನ್ನು 2048 ಕೋಟಿ ರುಪಾಯಿಗಳಿಗೆ ಖರೀದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಪೇಟಿಎಂ ಸಂಕಷ್ಟ ದಲ್ಲಿದೆ. ಹೀಗಾಗಿ ತನ್ನ ಸಿನಿಮಾ ಟಿಕೆಟಿಂಗ್ ವ್ಯವಹಾರ ಮಾರಿದೆ ಎನ್ನಲಾಗಿದೆ. ಆದರೂ ಪೇಟಿಎಂನಲ್ಲಿ 12 ತಿಂಗಳ ಮಟ್ಟಿಗೆ ಸಿನಿಮಾ ಟಿಕೆಟಿಂಗ್ ಸೌಲಭ್ಯ ಇರಲಿದೆ ಎಂದು ಪೇಟಿಎಂ ಕಂಪನಿ ಹೇಳಿದೆ.