ನ್ಯಾಚುರಲ್ ಸ್ಟಾರ್ ನಾನಿ ಅವರು ಸದ್ಯ ‘ಸರಿಪೋಧಾ ಸನಿವಾರಂ’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ನಾನಿಯನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸಮಂತಾ ಭೇಟಿಯಾಗಿದ್ದಾರೆ. ಹಲವು ವರ್ಷಗಳ ನಂತರ ಇಬ್ಬರ ಭೇಟಿ ನೋಡಿ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.
ವಿಮಾನ ನಿಲ್ದಾಣದಲ್ಲಿ ನಾನಿ ಸಿಕ್ಕಿದ್ದು ಸಮಂತಾ ಅಚ್ಚರಿ ಮೂಡಿಸಿದೆ. ಆ ನಂತರ ಇಬ್ಬರೂ ಜೊತೆಯಾಗಿ ಪ್ರಯಾಣ ಮಾಡಿದ್ದಾರೆ. ಸ್ವೀಟೇಸ್ಟ್ ಸರ್ಪ್ರೈಸ್ ಎಂದು ಅಡಿಬರಹ ನೀಡಿ ನಾನಿಯ ಮುಂಬರುವ ಸಿನಿಮಾಗೆ ಸಮಂತಾ ವಿಶ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಇಬ್ಬರೂ ಮಾತನಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ‘ಈಗ’ ಸಿನಿಮಾ ಜೋಡಿ ಮತ್ತೆ ಜೊತೆಯಾಗಿದ್ದಾರೆ ಎಂದು ಅಭಿಮಾನಿಗಳು ಇವರನ್ನು ಕಣ್ತುಂಬಿಕೊಂಡಿದ್ದಾರೆ. ಮತ್ತೆ ಒಟ್ಟಾಗಿ ಸಿನಿಮಾ ಮಾಡಿ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ.
ಅಂದಹಾಗೆ, 3 ಸಿನಿಮಾಗಳು ನಾನಿ ಮತ್ತು ಸಮಂತಾ ಜೊತೆಯಾಗಿ ನಟಿಸಿದ್ದಾರೆ. ಅದರಲ್ಲಿ `ಈಗ’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದರಲ್ಲಿ ಸುದೀಪ್ ವಿಲನ್ ಆಗಿ ನಟಿಸಿದ್ದರು.