ಚಿನ್ನ ಬೆಳ್ಳಿ ಖರೀದಿ ಮಾಡುವವರಿಗೆ ಶುಭಸುದ್ದಿ. ಚಿನ್ನದ ದರವು ಸತತ ಎರಡನೇ ದಿನವೂ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ 2900 ರೂಪಾಯಿ ತಗ್ಗಿದೆ. ಶ್ರಾವಣ ಮಾಸದಲ್ಲಿ ಚಿನ್ನ ಖರೀದಿ ಮಾಡಬೇಕು ಎಂಬುವವರಿಗೆ ಉತ್ತಮ ಸಂದರ್ಭವಾಗಿದೆ. ವರಮಹಾಲಕ್ಷ್ಮೀ ಹಬ್ಬದ ಬಳಿಕ ಸತತ ನಾಲ್ಕು ಬಾರಿ ಏರಿಕೆಯಾಗಿದ್ದ ಚಿನ್ನದ ದರ ಗುರುವಾರ ಮೊದಲ ಬಾರಿ ಇಳಿಕೆಯಾಗಿತ್ತು. ಸದ್ಯ ಶುಕ್ರವಾರವೂ ತುಸು ಇಳಿಕೆಯಾಗಿದೆ. ಇದು ಖರೀದಿ ಮಾಡುವವರಿಗೆ ಸಮಾಧಾನ ತರಿಸಿದೆ. ಇನ್ನು ಶುಕ್ರವಾರ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 220 ರೂ., ಬೆಳ್ಳಿ 1 ಕೆಜಿ 2900 ರೂ., ಇಳಿಕೆಯಾಗಿದೆ.
ಕರ್ನಾಟಕದ ಮಾರುಕಟ್ಟೆಯಲ್ಲಿ ಆಗಸ್ಟ್ 23 ಶುಕ್ರವಾರ 22 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 6,660 ರೂಪಾಯಿ ಇತ್ತು. 10 ಗ್ರಾಂಗೆ 65,650 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನ 1 ಗ್ರಾಂಗೆ 7,265 ರೂಪಾಯಿ ಅಂದರೆ, 10 ಗ್ರಾಂಗೆ 72,650 ರೂಪಾಯಿ ಆಗಲಿದೆ. ಇನ್ನು ದೇಶದ ವಿವಿಧ ನಗರಗಳಲ್ಲಿ ಮಾರಾಟ ದರ ವ್ಯತ್ಯಯವಿದೆ.