ಕಲಿಯುಗದ ಕಾಮದೇನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಪ್ರಭುಗಳ 353ನೇ ಆರಾಧನಾ ಮಹೋತ್ಸವ ಇಂದು ಮುಕ್ತಾಯವಾಗಲಿದೆ. ಕಳೆದ ಏಳು ದಿನಗಳ ಕಾಲ ರಾಯರ ಆರಾಧನೆ ಬಹಳ ವಿಜೃಂಭಣೆಯಿಂದ ನಡೆಯಿತು. ಏಳು ದಿನಗಳ ಕಾಲ ನಡೆದ ಆರಾಧನೆಯಲ್ಲಿ 67 ಲಕ್ಷ ಭಕ್ತರು ಭಾಗಿಯಾಗಿದ್ದರು.
ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ನಂತರ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪುನೀತರಾದರು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವನ್ನು ವಿದ್ಯುತ್ ದೀಪಗಳನ್ನು ಜಗಮಗಿಸುವ ಅಲಂಕರಿಸಲಾಗಿದೆ. ಮಂತ್ರಾಲಯದ ರಾಯರ ಮಠದ ಆವರಣದಲ್ಲಿರುವ ಉಬ್ಬುಶಿಲ್ಪಗಳನ್ನು ಕಂಡು ಭಕ್ತರು ಫಿದಾ ಆಗಿದ್ದಾರೆ.ಬಣ್ಣ-ಬಣ್ಣಗಳ ಲೈಟಿಂಗ್ಸ್ನಿಂದ ಸಂಜೆಯಿಂದ ತಡರಾತ್ರಿ ವರೆಗೆ ಉಬ್ಬು ಶಿಲ್ಪಗಳನ್ನು ವೀಕ್ಷಣೆ ಮಾಡಬಹುದಾಗಿದೆ.
ಉಬ್ಬು ಶಿಲ್ಪಗಳಲ್ಲಿ ವಿವಿಧ ಧಾರ್ಮಿಕ ಇತಿಹಾಸ, ದೇವಾನು-ದೇವತೆಗಳ ಚರಿತ್ರೆ ಉಲ್ಲೇಖಿಸಲಾಗಿದೆ. ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಉತ್ತರಾರಾಧನಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಸಂಪ್ರದಾಯದಂತೆ ಶ್ರೀ ಪ್ರಹಲ್ಲಾದರಾಜರ ಉತ್ಸವ ಮೂರ್ತಿಯನ್ನು ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠಕ್ಕೆ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅಲ್ಲಿ ಶ್ರೀ ಮಠಕ್ಕೆ ಹಿಂದಿರುಗುವ ಮೊದಲು ಮಂಗಳಾರತಿ ಮಾಡಲಾಯಿತು.
ಮೈಸೂರು ರಾಜವಂಶದ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅವರು ಕರ್ನಾಟಕ ಮೈಸೂರು ಮತ್ತು ಕೊಡಗು ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅವರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು. ನಂತರ ಪ.ಪೂ.ಶ್ರೀ ಸ್ವಾಮೀಜಿ ವಸಂತೋತ್ಸವಕ್ಕೆ ಚಾಲನೆ ನೀಡಿ ಶಾಸ್ತ್ರೋಕ್ತವಾಗಿ ಮಹಾ ರಥೋತ್ಸವ ಉದ್ಘಾಟಿಸಿದರು. ಈ ಮಹಾರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಆಶೀರ್ವಾದ ಪಡೆದರು.