ನಾಳೆ ಕೃಷ್ಣ ಜನ್ಮಾಷ್ಟಮಿ. ದೇಶದಾದ್ಯಂತ ಜನರು ಕೃಷ್ಣನ ಆಚರಣೆಯಲ್ಲಿ ಮುಳುಗಿರುತ್ತಾರೆ. ಶುಭದಿನವಾದ ನಾಳೆ ಹಲವರು ಬಂಗಾರ ಖರೀದಿಸಲು ಮುಂದಾಗೋದು ಮಾಮೂಲಿ. ಆದರೆ ನಿನ್ನೆಗಿಂತ ಇಂದು ಚಿನ್ನ ದಿಢೀರ್ ಏರಿಕೆಯಾಗಿದೆ. ಗ್ರಾಹಕರಿಗೆ ಈ ಬೆಲೆ ಏರಿಕೆ ಕೊಂಚ ಶಾಕ್ ನೀಡಿದಂತಾಗಿದೆ.
ಚಿನ್ನಕ್ಕೆ ಡಿಮ್ಯಾಂಡ್ ಕಡಿಮೆಯಾಗಲ್ಲ. ಬಹುತೇಕರು ದೀರ್ಘಾವದಿಯ ಹಣ ಹೂಡಿಕೆಗಾಗಿ ಚಿನ್ನದತ್ತ ಒಲವು ತೋರಿಸುತ್ತಾರೆ. ಅದಕ್ಕಾಗಿ ಚಿನ್ನ ಖರೀದಿಸಲು ಮುಂದಾಗುತ್ತಾರೆ. ಕೆಲವರಂತೂ ಬೆಲೆ ಏರಿಕೆ ಕಂಡರೂ ಸಹ ಮಾರುಕಟ್ಟೆಯಲ್ಲಿ ಮುಗಿಬಿದ್ದು ಚಿನ್ನ ಖರೀದಿಸುತ್ತಾರೆ. ಆದರೆ ನಿನ್ನೆ ಮತ್ತು ಇಂದಿನ ಮಾರುಕಟ್ಟೆಯನ್ನ ಗಮನಿಸಿದಾಗ ಚಿನ್ನದ ಬೆಲೆ 36 ರೂಪಾಯಿ ಏರಿಕೆ ಕಂಡಿದೆ.
22 ಕ್ಯಾರೆಟ್ನ ಚಿನ್ನದ ಬೆಲೆ
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 6,695 ಇದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 66,950 ಇದೆ.
24 ಕ್ಯಾರೆಟ್ನ ಚಿನ್ನದ ಬೆಲೆ
ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 7,304 ಆಗಿದೆ.
24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 73,040 ಇದೆ.
ಬೆಳ್ಳಿಯ ಬೆಲೆ
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 88 ಇದೆ.
ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 88,000 ಇದೆ.