ಡಿ ಬಾಸ್ ದರ್ಶನ್ ಜೈಲಿನಿಂದ ರಿಲೀಸ್ ಆಗದೇ ಹೋದ್ರೂ, ದಿನಕ್ಕೊಂದು ಸುದ್ದಿ ರಿಲೀಸ್ ಆಗ್ತಾ ಇದೆ, ಜೈಲಿನಲ್ಲಿ ದರ್ಶನ್ ಇರೋ ಫೋಟೋ ರಿಲೀಸ್ ಆಗ್ತಾ ಇದೆ. ಥಿಯೇಟರ್ನಲ್ಲಿ ದರ್ಶನ್ ಹಳೆ ಸಿನಿಮಾಗಳು ರಿಲೀಸ್ ಆಗ್ತಾನೇ ಇದೆ. ಈಗ ದರ್ಶನ್ ಅಭಿನಯದ ಬ್ಲಾಕ್ಬಸ್ಟರ್ ಸಿನಿಮಾ ಕರಿಯಾ ರೀ-ರಿಲೀಸ್ ಆಗ್ತಾ ಇದೆ. ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ ಕರಿಯ ರೀ-ರಿಲೀಸ್ ಆಗುತ್ತೆ ಅನ್ನೋ ಸುದ್ಧಿ, ಈ ಮೊದಲೇ ಬಂದಿತ್ತು. ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿತ್ತು, ಆದ್ರೆ ಸಿನಿಮಾ ಭರ್ಜರಿಯಾಗಿ 100ಕ್ಕೂ ಹೆಚ್ಚುಯ ಸ್ಕ್ರೀನ್ಗಳಲ್ಲಿ ಮತ್ತೆ ರಿಲೀಸ್ ಆಗ್ತಾ ಇರೋದು ಹೊಸ ದಾಖಲೆಯಾಗಿದೆ.
ಕಳೆದ ಎರಡ್ಮೂರು ವಾರದಿಂದ ಸ್ಯಾಂಡಲ್ವುಡ್ಗೆ ಭೀಮ ಹಾಗೂ ಕೃಷ್ಣಂ ಪ್ರಣಯ ಸಖಿ ಸಿನಿಮಾಗಳಿಂದ ನವಚೈತನ್ಯ ಬಂದಿದ್ದು, ಸಿನಿಮಾಗಳು ಸಾಲು ಸಾಲು ರಿಲೀಸ್ಗೆ ರೆಡಿಯಾಗಿ ನಿಂತಿವೆ, ಈ ಟ್ರಾಫಿಕ್ನಲ್ಲೂ ಕರಿಯ ರೀ-ರಿಲೀಸ್ ಇಷ್ಟು ಭರ್ಜರಿಯಾಗಿ ಆಗ್ತಾ ಇರೋದು ಕೆಲವರಿಗೆ ಸಿಹಿ, ಹಲವರಿಗೆ ಕಹಿ. ಈ ಹಿಂದೆ ದರ್ಶನ್ ಅಭಿನಯದ ಶಾಸ್ತ್ರಿ ಸಿನಿಮಾ ಕೂಡ, ದರ್ಶನ್ ಜೈಲುವಾಸದ ಅಡ್ವಾಂಟೇಜ್ ಪಡೆಯಲು ರೀ-ರಿಲೀಸ್ ಆಗಿ ಸಖತ್ ರೆಸ್ಪಾನ್ಸ್ ಪಡೆಯೋದ್ರ ಜೊತೆ ಕೆಲೆಕ್ಷನ್ನಲ್ಲಿ ಕಾಸು ಬಾಚಿಕೊಂಡಿತ್ತು, ಈಗ ಕರಿಯ ಸಿನಿಮಾದ ಸರದಿ.
ಪ್ರೇಮ್ ನಿರ್ದೇಶನದ ಚೊಚ್ಚಲ ಸಿನಿಮಾ ಕರಿಯ ಸದ್ಯ 100 ಸ್ಕ್ರೀನ್ಗಳಲ್ಲಿ ರಿಲೀಸ್ ಆಗ್ತಾ ಇದ್ದು, ಇನ್ನಷ್ಟು ಸ್ಕ್ರೀನ್ಗಳು ಹೆಚ್ಚಾಗು ಸಾಧ್ಯತೆ ಇದೆ. ಈ ಸಿನಿಮಾದ ಜೊತೆಗೆ ವಿನಯ್ ರಾಜ್ಕುಮಾರ್ ಅಭಿನಯದ ಪೆಪೆ, ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ಲೀಡ್ನಲ್ಲಿ ನಟಿಸಿರೋ ಲಾಫಿಂಗ್ ಬುದ್ದ ಸೇರಿದಂತೆ ಹಲವು ಸಿನಿಮಾಗಳು ಕೂಡ ರಿಲೀಸ್ ಆಗ್ತಾ ಇದೆ. ಸದ್ಯ ಭೀಮ ಹಾಗೂ ಕೃಷ್ಣಂ ಪ್ರಣಯ ಸಖಿ ಸಿನಿಮಾಗಳಿಂದ ಥಿಯೇಟರ್ಗಳು ತುಂಬಿದ್ದು, ಕರಿಯನೂ ಮತ್ತೆ ಎಂಟ್ರಿ ಕೊಟ್ರೆ, ಹೊಸ ಸಿನಿಮಾಗಳಿಗೆ ಇದೊಂಥರಾ ಸಂಕಟ ಶುರುವಾಗಲಿದೆ..!