ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಜೈಲು ಸೇರಿ 2 ತಿಂಗಳು ಕಳೆದಿದೆ. ಕೊಲೆ ಕೇಸಲ್ಲಿ ನಟಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ಇಂದು ಕೋರ್ಟ್ ನಲ್ಲಿ ಪವಿತ್ರಾ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶರು ಅರ್ಜಿ ವಿಚಾರಣೆ ಮುಂದೂಡಿದ್ದಾರೆ. ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ರು. ಮೊದಲು ಅಪರಿಚಿತ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗುತ್ತೆ ಬಳಿಕ ನನ್ನ ಕಕ್ಷಿದಾರರು ಸೇರಿ 17 ಜನರನ್ನ ಆರೋಪಿ ಮಾಡಲಾಗಿದೆ ಎಂದ್ರು. ಇದೇ ವೇಳೆ ಟಾಮಿ ಸೆಬಾಸ್ಟಿಯನ್ ಅವರು ಎಸ್ ಪಿ ಪಿ ಸಲ್ಲಿಕೆ ಮಾಡಿದ್ದ ಆಕ್ಷೇಪಣೆ ಓದಿದ್ರು. ಈಗಾಗಲೇ ತನಿಖೆ ಮುಕ್ತಾಯವಾಗಿದೆ. ಎಲ್ಲಾ ಎಫ್ ಎಸ್ ಎಲ್ ರಿಪೋರ್ಟ್ ಗಳು ಬಂದಾಗಿದೆ. ರಕ್ತದ ಕಲೆಯ ರಿಪೋರ್ಟ್ ಸಹ ಪೊಲೀಸರ ಕೈಗೆ ಸೇರಿದೆ. ಪವಿತ್ರ ಗೌಡ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದಿದ್ದಾರೆ ಅಂತ ಉಲ್ಲೇಖ ಮಾಡಿದ್ದಾರೆ. ಅದಕ್ಕೆ ಪೂರಕವಾದ ರಿಪೋರ್ಟ್ ಕೂಡ ಪಡೆದಿದ್ದಾರೆ ಎಂದ ಪವಿತ್ರಾ ಪರ ವಕೀಲರು ಅಲಹಾಬಾದ್ ಹೈಕೋರ್ಟ್ ಅದೇಶ ಉಲ್ಲೇಖ ಮಾಡಿ ಮಹಿಳೆಯಾದ ಕಾರಣ ಜಾಮೀನು ನೀಡಬಹುದು ಎಂದು ವಾದ ಮಂಡಿಸಿದ್ರು.
ದರ್ಶನ್ ಸೂಚನೆಯಂತೆ ಪವನ್ ಹೋಗಿ ರಾಘವೇಂದ್ರಗೆ ಹೇಳಿದ್ದಾನೆ. ಅದರಂತೆ ರಾಘವೇಂದ್ರ ಹಾಗೂ ಉಳಿದ ಆರೋಪಿಗಳು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಪವಿತ್ರಗೌಡಗೆ ತಮಗೆ ಬರ್ತಾ ಇದ್ದ ಮೆಸೇಜ್ ಬಗ್ಗೆ ಪವನ್ ಗೆ ಹೇಳಿದ್ದರು. ಪವನ್ ಈ ವಿಚಾರವನ್ನು ದರ್ಶನ್ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ಅವ್ರೆಲ್ಲಾ ಸೇರಿ ಪ್ಲಾನ್ ಮಾಡಿ ರೇಣುಕಾಸ್ವಾಮಿಯನ್ನು ಕರೆತಂದಿದ್ರು. ಚಿತ್ರದುರ್ಗದಿಂದ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್ ಗೆ ಕರ್ಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಪವಿತ್ರಾ ಗೌಡ ಪಾತ್ರ ಇಲ್ಲ. ಪೊಲೀಸರು ಆಕೆಯ ಸುತ್ತ ಮಾಡಿರೋ ಆರೋಪಗಳು ನಿಜವಲ್ಲ ಎಂದು ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ರು. ಪವಿತ್ರಾ ಗೌಡ ಪರ ವಕೀಲ ವಾದದ ಬಳಿಕ ಕೆಲ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ನಾಳೆಗೆ 4 ಅರ್ಜಿಗಳ ವಿಚಾರಣೆ ಮುಂದೂಡಿದೆ. ನಾಳೆಯೇ ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದ ಮಂಡನೆಗೂ ಸೂಚನೆ ನೀಡಿದ್ದು, ನಟಿ ಪವಿತ್ರಾ ಗೌಡಗೆ ಬೇಲ್ ಸಿಗುತ್ತಾ? ಇಲ್ವಾ ಅನ್ನೋದನ್ನು ಕಾದು ನೋಡಬೇಕಿದೆ.