ಸ್ಯಾಂಡಲ್ವುಡ್ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಕನ್ನಡದ ಖ್ಯಾತ ನಿರ್ಮಾಪಕರಾದಂತಹ ಕೆ. ಪ್ರಭಾಕರ್ ಅವರು ಹೃದಯಾಘಾರದಿಂದ ಇಂದು ಸಾವನ್ನಪ್ಪಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕ ಕೆ ಪ್ರಭಾಕರ್ (64) ವಿಧಿವಶರಾಗಿದ್ದು, ಇಂದು ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಒಳಗಾಗಿದ್ದ ಕೆ ಪ್ರಭಾಕರ್ ಅವರನ್ನು ಅಪೋಲೋ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಲಿಸದೆ ಇಂದು ನಿಧನರಾಗಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸಭ್ಯ ನಿರ್ಮಾಪಕ ಎಂದು ಕೆ. ಪ್ರಭಾಕರ್ ಅವರು ಗುರುತಿಸಿಕೊಂಡಿದ್ದಾರೆ. ಅನೇಕ ಸ್ಟಾರ್ ಕಲಾವಿದರ ಜೊತೆ ಅವರು ಸಿನಿಮಾ ಮಾಡಿದ್ದರು. ಕಾಶಿನಾಥ್, ಶಿವರಾಜ್ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರಾಧಿಕಾ ಕುಮಾರಸ್ವಾಮಿ ಮುಂತಾದ ಕಲಾವಿದರ ಸಿನಿಮಾಗಳಿಗೆ ಕೆ. ಪ್ರಭಾಕರ್ ಅವರು ಬಂಡವಾಳ ಹೂಡಿದ್ದರು. ಹಲವು ಸಿನಿಮಾಗಳ ಮೂಲಕ ಅವರು ಹೆಸರು ಗಳಿಸಿದ್ದರು. “ಅವಳೇ ನನ್ನ ಹೆಂಡತಿ”, “ಎಲ್ಲರಂತಲ್ಲ ನನ್ನ ಗಂಡ”, “ಅಣ್ಣ-ತಂಗಿ”, “ಲವ-ಕುಶ” ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಿಗೆ ಕೆ ಪ್ರಭಾಕರ್ ನಿರ್ಮಾಪಕರಾಗಿದ್ದರು.