ಮಾಜಿ ಪತ್ನಿ ಕಿರಣ್ ರಾವ್ ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಬಾಲಿವುಡ್ ತೊರೆಯಲು ಸಿದ್ದ ಎಂದು ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ಅವರ ಪಾಡ್ ಕಾಸ್ಟ್ನಲ್ಲಿ ಮಾತನಾಡಿರುವ ಅಮೀರ್ ಖಾನ್, ಸಿನಿಮಾ ಉದ್ಯಮ ತೊರೆಯುವ ಕುರಿತು ಮಾತನಾಡಿದರು.
ಕಿರಣ್ ರಾವ್ ಮತ್ತು ಅವರ ಮಕ್ಕಳೊಂದಿಗೆ ಕುಟುಂಬದ ಸಮಯ ಮೀಸಲಿಡಲು ಬಾಲಿವುಡ್ ಅನ್ನು ತೊರೆಯಲು ಸಿದ್ಧ ಎಂದು ತಿಳಿಸಿದ್ದಾರೆ, ಆದರೆ ಇದು ಅವರ ಕುಟುಂಬಕ್ಕೆ ಸಂಪೂರ್ಣವಾಗಿ ದಿಗ್ಭ್ರಮೆಗೊಳ್ಳುವಂತೆ ಮಾಡಿತು. ಅವರೊಂದಿಗೆ ಮಾತನಾಡಿ, ಸಿನಿಮಾದಿಂದ ದೂರ ಸರಿಯದಂತೆ ಒತ್ತಾಯಿಸಿದರು. ಪಾಡ್ಕ್ಯಾಸ್ಟ್ನಲ್ಲಿ ಅಮೀರ್ ಖಾನ್ ಅವರ ಕುಟುಂಬವು ಚಲನಚಿತ್ರಗಳನ್ನು ತೊರೆಯದಂತೆ ತಾಕೀತು ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಮೂರು ವರ್ಷಗಳ ಹಿಂದೆ ಚಲನಚಿತ್ರಗಳನ್ನು ತೊರೆಯುತ್ತಿದ್ದೇನೆ ಎಂದು ಹೇಳಿದಾಗ ಕುಟುಂಬದವರ ಪ್ರತಿಕ್ರಿಯೆ ಹೀಗಿತ್ತು, ನೀವು ಚಲನಚಿತ್ರಗಳನ್ನು ಹೇಗೆ ಬಿಡುತ್ತೀರಿ? ಕಳೆದ 30 ವರ್ಷಗಳಿಂದ ಹುಚ್ಚರಂತೆ ಅದರಲ್ಲೇ ತೊಡಗಿಸಿಕೊಂಡಿದ್ದೀರಿ. ಈಗ ಭಾವುಕರಾಗಿ ಹೀಗೆ ಹೇಳುತ್ತಿರಬೇಕು. ಆದರೆ ನಿಮಗೆ ಅದು ಸಾಧ್ಯವಾಗುವುದಿಲ್ಲ ಎಂದಿದ್ದರು ಎಂದು ಹೇಳಿದ್ದಾರೆ.
ನಂತರ ನಾನು ನನ್ನ ತಂಡ, ನಿರ್ಮಾಣ ತಂಡವನ್ನು ಕರೆದೆ. ಅದರಲ್ಲಿ ಕಿರಣ್ ಕೂಡ ಇದ್ದರು. ನಾನು ಇನ್ನು ಮುಂದೆ ಈ ಕಂಪನಿಯಲ್ಲಿ ಇರುವುದಿಲ್ಲ ಎಂದು ಹೇಳಿದೆ. ಯಾಕೆಂದರೆ ನಾನು ಚಲನಚಿತ್ರಗಳನ್ನು ಮಾಡುವುದನ್ನು ನಿಲ್ಲಿಸುತ್ತೇನೆ. ನೀವು ನನ್ನಿಂದ ಕಂಪನಿಯನ್ನು ತೆಗೆದುಕೊಂಡು ಚಲನಚಿತ್ರಗಳನ್ನು ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿರುವುದಾಗಿ ತಿಳಿಸಿದರು. ಲಾಲ್ ಸಿಂಗ್ ಚಡ್ಡಾದಲ್ಲಿ ಕೊನೆಯದಾಗಿ ನಟಿಸಿದ ಅಮೀರ್, ತನ್ನ ನಿರ್ಧಾರದಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದರು, ಅದೇ ರೀತಿ ಅಸಮಾಧಾನಗೊಂಡಿದ್ದರು. ಕಿರಣ್ ರಾವ್, ನಮ್ಮೆಲ್ಲರನ್ನೂ ಬಿಟ್ಟು ಹೋಗುತ್ತೀಯ ಎಂದು ಕೇಳಿದ್ದರು. ನಾನು ಇಲ್ಲ, ನಾನು ಚಲನಚಿತ್ರಗಳನ್ನು ಬಿಡುತ್ತಿದ್ದೇನೆ. ನಿಮ್ಮೆಲ್ಲರೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ ಎಂದು ಹೇಳಿದೆ.