ವಿಧಾನಸಭೆಯಲ್ಲಿ ರಾಜ್ಯದ ಆರ್ಥಿಕ ಸಂಕಷ್ಟ ಹಾಗೂ ತಾವು ಸಂಬಳ ಪಡೆಯದ ವಿಷಯ ಪ್ರಕಟಿಸಿದ ಸಿಎಂ ಸುಖವಿಂದರ್ ಸಿಂಗ್ ಸುಖು, ʻನಾವು ಸಂಬಳ ಪಡೆಯದಿರಲು ನಿರ್ಧರಿಸಿದ್ದೇವೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದೇನಲ್ಲ. ಇದು ಆರ್ಥಿಕ ಸ್ಥಿತಿ ಸರಿದೂಗಿಸಲು ಸಾಂಕೇತಿಕ ಅಳಿಲು ಸೇವೆ ಇದ್ದಂತೆ. ಬಿಜೆಪಿ ಶಾಸಕರು ಕೂಡ ಇದನ್ನು ಅನುಸರಿಸಬೇಕುʼ ಎಂದು ಆಗ್ರಹಿಸಿದರು.
ಆದರೆ ಇದನ್ನು ವಿರೋಧಿಸಿದ ವಿಪಕ್ಷ ನಾಯಕ ಜೈರಾಂ ಠಾಕೂರ್ ನೇತೃತ್ವದ ಬಿಜೆಪಿ ಶಾಸಕರು, ʻಮದ್ಯ ನೀತಿಯಿಂದ ರಾಜ್ಯಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಕಡಿಮೆ ದರದಲ್ಲಿ ಮದ್ಯದಂಗಡಿ ಲೈಸೆನ್ಸ್ ನೀಡಿದ್ದು ಇದಕ್ಕೆ ಕಾರಣʼ ಎಂದು ಹೇಳಿ ಸಭಾತ್ಯಾಗ ಮಾಡಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ದಿಲ್ಲಿಯಲ್ಲಿ ಪ್ರತಿಕ್ರಿಯಿಸಿ, ʻಹಿಮಾಚಲದಲ್ಲಿ ಸಿಎಂ ಸಂಬಳಕ್ಕೂ ಹಣವಿಲ್ಲ. ರಾಹುಲ್ ಗಾಂಧಿ ಅವರ ಉಚಿತ ಯೋಜನೆಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಭಯಾನಕವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಮತ್ತು ಇದು ರಾಹುಲ್ ಗಾಂಧಿಯವರ ಗ್ಯಾರಂಟಿ ಮಾದರಿಯಾಗಿದೆ. ಇದನ್ನು ಸರಿದೂಗಿಸಲು ಕರ್ನಾಟಕದಲ್ಲಿಯೂ ಹಾಲು, ನೀರಿನ ಬೆಲೆ ಹೆಚ್ಚಿಸಲಾಗಿದ. ಕರ್ನಾಟಕವೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಎಂದು ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆಯಾಚಿಸಬೇಕು. ಏಕೆಂದರೆ ಅವರ ಭರವಸೆಗಳೆಲ್ಲವೂ ಸುಳ್ಳೆಂದು ಇಂದು ಸಾಬೀತಾಗಿದೆ’ ಎಂದಿದ್ದಾರೆ.