ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಅತ್ಯಗತ್ಯವಾಗಿದೆ. ಇಂದಿನ ಕಾಲಘಟ್ಟದಲ್ಲಿ ಹೂಡಿಕೆ ಅಥವಾ ಉಳಿತಾಯ ಎನ್ನುವುದು ಅನಿವಾರ್ಯವಾಗಿದೆ. ಶಿಕ್ಷಣ ಮುಗಿಸಿ ಉದ್ಯೋಗದತ್ತ ಮುಖ ಮಾಡುವ ಅನೇಕರು ಹೂಡಿಕೆಯತ್ತ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಸುರಕ್ಷಿತ ಹಾಗೂ ಭವಿಷ್ಯದ ದೃಷ್ಟಿಯಿಂದ ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಎಚ್ ಡಿ ಎಫ್ ಸಿ ಲೈಫ್ ಗ್ಯಾರಂಟಿಡ್ ಆದಾಯ ವಿಮಾ ಯೋಜನೆ ಉತ್ತಮ ಆಯ್ಕೆಯಾಗಿದೆ. ಸರಿಸುಮಾರು 15 ವರ್ಷಗಳ ಕಾಲ ಈ ಪಾಲಿಸಿಯಲ್ಲಿ ನಿಗದಿತ ಮೊತ್ತವನ್ನು ಪಾವತಿ ಮಾಡಿ ಆ ಬಳಿಕ ಲಾಭವನ್ನು ಪಡೆಯಬಹುದಾಗಿದೆ.
.ಎಚ್ ಡಿ ಎಫ್ ಸಿ ಲೈಫ್ ಗ್ಯಾರಂಟಿಡ್ ಆದಾಯ ವಿಮಾ ಯೋಜನೆಯು ನಾನ್-ಲಿಂಕ್ಡ್ ನಾನ್-ಪಾರ್ಟಿಸಿಟಿಂಗ್ ವೈಯಕ್ತಿಕ ಜೀವ ವಿಮಾ ಉಳಿತಾಯ ಯೋಜನೆಯಾಗಿದೆ. ಕಂಪನಿಯ ಪ್ರಕಾರ, ಯೋಜನೆಯು ಪ್ರೀಮಿಯಂ ಪಾವತಿ ಅವಧಿಯು 15 ವರ್ಷಗಳಾಗಿದ್ದು, ಆ ಅವಧಿಯು ಪೂರ್ಣಗೊಳಿಸಿದ ನಂತರ ಖಾತರಿಪಡಿಸಿದ ತೆರಿಗೆ-ಮುಕ್ತ ಪ್ರಯೋಜನಗಳನ್ನು ಪಡೆಯಬಹುದು. ಪಾಲಿಸಿ ಅವಧಿಯು ಪೂರ್ಣಗೊಂಡ ಬಳಿಕ ಖಾತರಿಪಡಿಸಿದ ಆದಾಯವು ಪಾಲಿಸಿದಾರನಿಗೆ ಸಿಗುತ್ತದೆ.
ಖಾತರಿಪಡಿಸಿದ ಆದಾಯ: ಈ ಯೋಜನೆಯು ತೆರಿಗೆ ಕಾನೂನಿನ ಪ್ರಕಾರವಾಗಿ ಉಳಿತಾಯದೊಂದಿಗೆ ವಾರ್ಷಿಕವಾಗಿ 11% ರಿಂದ 13% ವರೆಗೆ ನಿಯಮಿತ ಆದಾಯವನ್ನು ನೀಡುತ್ತದೆ. ಆಯ್ಕೆಮಾಡಿದ ಅವಧಿಗೆ ಪ್ರೀಮಿಯಂ ಪಾವತಿಗಳನ್ನು ಮಾಡಿ, ನಂತರ ಪಾಲಿಸಿಯು ಅವಧಿಯು ಪೂರ್ಣಗೊಂಡ ಬಳಿಕ ಖಾತರಿ ಪಡಿಸಿದ ಮೊತ್ತವು ದೊರೆಯುತ್ತದೆ.
ಮೆಚ್ಯುರಿಟಿ ಲಾಭ: ಚಾಲ್ತಿಯಲ್ಲಿರುವ ಆದಾಯ ತೆರಿಗೆಯ ಪ್ರಕಾರವಾಗಿ ತೆರಿಗೆ ಉಳಿತಾಯದೊಂದಿಗೆ ಪಾಲಿಸಿ ಮೆಚ್ಯೂರಿಟಿಯ ಮೇಲೆ ದೊಡ್ಡ ಮೊತ್ತದ ಹಣವನ್ನು ಪಡೆಯಬಹುದು.
- ಆದಾಯ ತೆರಿಗೆ ಪ್ರಯೋಜನಗಳು : ಪಾಲಿಸಿದಾರರು ಆದಾಯ ತೆರಿಗೆ ಕಾಯಿದೆ, 1961 ರ ವಿಭಾಗ 80C ಮತ್ತು ಸೆಕ್ಷನ್ 10(10D) ಅಡಿಯಲ್ಲಿ ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿದ್ದು, ಆದಾಯ ತೆರಿಗೆಯಲ್ಲಿರುವ ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ.
- ಗ್ಯಾರಂಟಿಡ್ ಡೆತ್ ಬೆನಿಫಿಟ್ : ಈ ಯೋಜನೆಯಡಿ ಗ್ಯಾರಂಟಿಡ್ ಡೆತ್ ಬೆನಿಫಿಟ್ ಪ್ರಯೋಜನವನ್ನು ಪಡೆಯಬಹುದು. ಈ ಪ್ರಯೋಜನದಡಿಯಲ್ಲಿ ವಾರ್ಷಿಕ ಪ್ರೀಮಿಯಂ ಅಥವಾ ವಿಮಾ ಮೊತ್ತದ 10 ಪಟ್ಟು ಹೆಚ್ಚು ಅಥವಾ ಪಾವತಿಸಿದ ಪ್ರೀಮಿಯಂಗಳ 105 % ರಷ್ಟು ಹಣವನ್ನು ಈ ಕಂಪೆನಿಯು ನೀಡುತ್ತದೆ. ಇದು ಈ ಪಾಲಿಸಿಯ ಸಂಪೂರ್ಣ ಅವಧಿಯವರೆಗಿನ ಮೊತ್ತವನ್ನು ಒಳಗೊಂಡಿರುತ್ತದೆ.
ಎಚ್ಡಿಎಫ್ಸಿ ಲೈಫ್ ಗ್ಯಾರಂಟಿಡ್ ಆದಾಯ ವಿಮಾ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಉದಾಹರಣೆಗೆ 15 ವರ್ಷಗಳ ನಂತರ ನಿಯಮಿತ ಖಾತರಿಯ ಆದಾಯವನ್ನು ಪಡೆಯಲು 35 ವರ್ಷ ವಯಸ್ಸಿನ ವಿನೀತ್ ವಾರ್ಷಿಕವಾಗಿ 50,665 ರೂ ಪಾವತಿಸಲು ಸಿದ್ದರಿದ್ದು, ಮುಂದಿನ 15 ವರ್ಷಗಳವರೆಗೆ ಈ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕು.
ವಿನೀತ್ ಅವರ ಪಾಲಿಸಿ ಅವಧಿ : 30 ವರ್ಷಗಳು
ಪ್ರೀಮಿಯಂ ಪಾವತಿ ಅವಧಿ: 15 ವರ್ಷಗಳು
ಖಾತರಿಯ ಆದಾಯ: ವರ್ಷಕ್ಕೆ ರೂ 1,00,881 (15 ವರ್ಷಗಳು ಪೂರ್ಣಗೊಂಡ ಬಳಿಕ ಈ ಆದಾಯವು ಸಿಗುತ್ತದೆ. ಇದು ವಿಮಾ ಮೊತ್ತದ 13% ಕ್ಕೆ ಸಮನಾಗಿರುತ್ತದೆ).
ಮೆಚ್ಯೂರಿಟಿ ಲಾಭ: 7,76,008 ರೂ ಆಗಿದ್ದು (ಪಾಲಿಸಿ ಅವಧಿ 30 ವರ್ಷಗಳು ಪೂರ್ಣಗೊಂಡ ಬಳಿಕ ಈ ಹಣವು ಕೈ ಸೇರುತ್ತದೆ) ಇದು ಪಾಲಿಸಿದಾರನಿಗೆ ಸಿಗುವ ಕೊನೆಯ ಮೊತ್ತವಾಗಿರುತ್ತದೆ.
ಗ್ಯಾರಂಟಿಡ್ ಡೆತ್ ಬೆನಿಫಿಟ್: ದುರದೃಷ್ಟವಶಾತ್ ವಿನೀತ್ ನಿಧನರಾದರೆ, ಅವರ ಕುಟುಂಬವು ಆರ್ಥಿಕ ಸುರಕ್ಷತೆಯ ಲಾಭವನ್ನು ನೀಡುತ್ತದೆ. ವಾರ್ಷಿಕ ಪ್ರೀಮಿಯಂನ 10 ಪಟ್ಟು ಅಥವಾ ಪಾವತಿಸಿದ ಒಟ್ಟು ಪ್ರೀಮಿಯಂಗಳ 105 ಪ್ರತಿಶತದಷ್ಟು ಹಣವು ಕುಟುಂಬದ ಸದಸ್ಯರಿಗೆ ಸಿಗುತ್ತದೆ. ಈ ಯೋಜನೆಯು ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ರಕ್ಷಿಸಲು ಸಹಕಾರಿಯಾಗಿದೆ.