ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಭಾರತದ ಶದರ್ ಕುಮಾರ್ ಹಾಗೂ ಮರಿಯಪ್ಪನ್ ತಂಗವೇಲು ಪದಕಗಳನ್ನು ಗೆದ್ದಿದ್ದಾರೆ. 1.88 ಮೀಟರ್ ಎತ್ತರ ಜಿಗಿತದೊಂದಿಗೆ ಶರದ್ ಕುಮಾರ್ ಬೆಳ್ಳಿ ಪದಕ ಗೆದ್ದರೆ, 1.85 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಮರಿಯಪ್ಪನ್ ತಂಗವೇಲು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಟಿ63 ವಿಭಾಗದಲ್ಲಿ ವಿಶ್ವ ದಾಖಲೆ ಹೊಂದಿರುವ ಅಮೆರಿಕದ ಎಜ್ರಾ ಫ್ರೆಚ್ ಅವರು 1.94 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಪ್ಯಾರಾಲಿಂಪಿಕ್ಸ್ನಲ್ಲಿ ಹೊಸ ದಾಖಲೆಯನ್ನು ಬರೆದು, ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು. 2016 ರಲ್ಲಿ ರಿಯೊ ಡಿ ಜನೈರೊದಲ್ಲಿ ಚಿನ್ನ ಮತ್ತು ಟೋಕಿಯೊದಲ್ಲಿ ಬೆಳ್ಳಿ ಗೆದ್ದಿದ್ದ ಮರಿಯಪ್ಪನ್ ಈ ಬಾರಿ ಕೂಡ ಪದಕವನ್ನು ಗೆದ್ದಿರುವುದು ವಿಶೇಷ. ಇದರೊಂದಿಗೆ ಮೂರು ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ವಿಶೇಷ ಸಾಧನೆ ಮಾಡಿದರು.