ಬೆಂಗಳೂರಿನ ಹಲವೆಡೆ ಭಾನುವಾರ, ಸೋಮವಾರ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಸೇಂಟ್ ಮೇರಿಸ್ ಬೆಸಿಲಿಕಾದ ವಾರ್ಷಿಕ ಹಬ್ಬ ಮತ್ತು ರಥೋತ್ಸವದ ಪ್ರಯುಕ್ತ ಸಿಲಿಕಾನ್ ಸಿಟಿಯ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಯಾವಲ್ಲಾ ರಸ್ತೆಗಳಲ್ಲಿ ಸಂಚಾರಿಸುವಂತಿಲ್ಲ.
ಧರ್ಮರಾಜ ಕೋಯಿಲ್ ಸ್ಟ್ರೀಟ್, ಬ್ರಾಡ್ವೇ ರಸ್ತೆಯಿಂದ ರಸೆಲ್ ಮಾರ್ಕೆಟ್ ರಸ್ತೆ, ಬಿಆರ್ವಿ ಜಂಕ್ಷನ್, ಬಾಳೇಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ ಸಂಚರಿಸುವ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಅದರ ಜೊತೆಗೆ ರಸೆಲ್ ಮಾರ್ಕೆಟ್, ಬ್ರಾಡ್ವೆ ರಸ್ತೆ, ಮೀನಾಕ್ಷಿ ಕೊಯಿಲ್ ಸ್ಟ್ರೀಟ್, ಸೆಂಟ್ರಲ್ ಸ್ಟ್ರೀಟ್, ಶಿವಾಜಿ ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ, ಯೂನಿಯನ್ ಸ್ಟ್ರೀಟ್, ಇನ್ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಆಸ್ಪತ್ರೆ ರಸ್ತೆ, ಲೇಡಿ ಕರ್ಜನ್ ರಸ್ತೆ, ವಿಎಸ್ಎನ್ ರಸ್ತೆ, ಪ್ಲೇನ್ ಸ್ಟ್ರೀಟ್ ಮತ್ತು ಎಂಜಿ ರಸ್ತೆಯ ಸುತ್ತಮುತ್ತ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಕಾಮರಾಜ್ ರಸ್ತೆ ಪಾರ್ಕಿಂಗ್ ಸ್ಥಳ, ಸಫೀನಾ ಪ್ಲಾಜಾ ಎದುರು ಮುಖ್ಯ ಗಾರ್ಡ್ ಕ್ರಾಸ್ ರಸ್ತೆ, ಜಸ್ಮಾ ಭವನ ರಸ್ತೆ, ಗಂಗಾಧರ ಚೆಟ್ಟಿ ರಸ್ತೆಯ ಆರ್ಬಿಎಎನ್ಎಂಎಸ್ ಮೈದಾನ ಮತ್ತು ಡಿಕನ್ಸನ್ ರಸ್ತೆಯಲ್ಲಿರುವ ಮುಸ್ಲಿಂ ಅನಾಥಾಶ್ರಮದಲ್ಲಿ ವಾಹನ ನಿಲ್ಲಿಸಬಹುದಾಗಿದೆ. ಇನ್ನು ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಪರ್ಯಾಯವಾಗಿ ತಿಮ್ಮಯ್ಯ ರಸ್ತೆ, ಕ್ವೀನ್ಸ್ ರಸ್ತೆ ಮತ್ತು ಇನ್ಫೆಂಟ್ರಿ ರಸ್ತೆಯ ಮೂಲಕ ಸಂಚಾರ ಮಾಡಬಹುದಾಗಿದೆ.