ಶನಿವಾರ ಲಕ್ನೋದ ಟ್ರಾನ್ಸ್ಪೋರ್ಟ್ ನಗರ ಪ್ರದೇಶದಲ್ಲಿ 3 ಅಂತಸ್ತಿನ ಕಟ್ಟಡ ಕುಸಿದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಸುಮಾರು ಹತ್ತು ಮಂದಿ ಸಿಲುಕಿರುವ ಶಂಕೆ ಇದೆ. ಅಧಿಕಾರಿಗಳ ಪ್ರಕಾರ, ಕಟ್ಟಡದ ನೆಲಮಾಳಿಗೆಯಲ್ಲಿ ಕಟ್ಟಡ ಕುಸಿತದ ವೇಳೆ ಕಾಮಗಾರಿ ನಡೆಯುತ್ತಿತ್ತು. ಘಟನೆಯಲ್ಲಿ ಸುಮಾರು 13 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರ್ಮಿಲಾಪ್ ಬಿಲ್ಡಿಂಗ್ ಎಂದು ಕರೆಯಲ್ಪಡುವ ಕಟ್ಟಡವನ್ನು ಔಷಧ ವ್ಯಾಪಾರಕ್ಕಾಗಿ ಗೋಡೌನ್ ಆಗಿ ಬಳಸಲಾಗುತ್ತಿತ್ತು. ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ