ರೇಣುಕಾಸ್ವಾಮಿ ಕೇಸ್ನಲ್ಲಿ A1 ಪವಿತ್ರಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ರೆ A2 ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇವರಿಬ್ಬರ ಸ್ನೇಹ, ಗೆಳೆತನದಿಂದ ರೇಣುಕಾಸ್ವಾಮಿ ಚಿತ್ರ, ವಿಚಿತ್ರ ಹಿಂಸೆ ಅನುಭವಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಚಾರ್ಜ್ಶೀಟ್ನಲ್ಲಿ ದರ್ಶನ್ , ಪವಿತ್ರಾಗೌಡ ಅವರ ಚಾಟಿಂಗ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
A1 ಪವಿತ್ರ ಗೌಡ ಅವರಿಗೆ ದರ್ಶನ್ ಅವರು ಒಂದು ದಿನವೂ ಬಿಡದೇ ಗುಡ್ ಮಾರ್ನಿಂಗ್ ಮೆಸೇಜ್ ಮಾಡಿದ್ದಾರೆ. ಪವಿತ್ರಾ ಗೌಡ ಅವರು ದರ್ಶನ್ರನ್ನ ಸುಬ್ಬಾ ಅಂತ ಕರೆದಿದ್ರೆ ದರ್ಶನ್ ಅವರು ಎಲ್ಲಾ ಚಾಟ್ನಲ್ಲಿ ಮುದ್ದು ಹೆಂಡ್ತಿ ಅಂತಾ ಕರೆದಿದ್ದಾರೆ. ಕೋಪ ಬಂದಾಗಲೆಲ್ಲಾ ಪವಿತ್ರಾ ಗೌಡ ದರ್ಶನ್ ಅವರ ನಂಬರ್ ಅನ್ನು ಬ್ಲಾಕ್ ಮಾಡುತ್ತಿದ್ದ ಪ್ರೀತಿಯ ರಹಸ್ಯ ಕೂಡ ಚಾರ್ಜ್ಶೀಟ್ನಲ್ಲಿ ರಿವೀಲ್ ಆಗಿದೆ.