ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇಂದು ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ನಲ್ಲಿ ಚೀನಾ ವಿರುದ್ಧ ಸೋಲನುಭವಿಸಿರುವ ಪಾಕಿಸ್ತಾನ ತಂಡ ಫೈನಲ್ ರೇಸ್ನಿಂದ ಹೊರಬಿದ್ದಿದೆ.
ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇಂದು ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ನಲ್ಲಿ ಚೀನಾ ವಿರುದ್ಧ ಸೋಲನುಭವಿಸಿರುವ ಪಾಕಿಸ್ತಾನ ತಂಡ ಫೈನಲ್ ರೇಸ್ನಿಂದ ಹೊರಬಿದ್ದಿದೆ. ಇತ್ತ ಪೆನಾಲ್ಟಿ ಶೂಟೌಟ್ನಲ್ಲಿ 2-0 ಅಂತರದಿಂದ ಪಾಕಿಸ್ತಾನವನ್ನು ಮಣಿಸಿದ ಚೀನಾ ಇದೇ ಮೊದಲ ಬಾರಿಗೆ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ಗೇರಿದೆ. ಉಭಯ ತಂಡಗಳ ನಡುವೆ 60 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿದವು. ಆ ನಂತರ ಪೆನಾಲ್ಟಿ ಶೂಟ್-ಔಟ್ನಲ್ಲಿ ನಿರ್ಧಾರವಾದ ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸುವಲ್ಲಿ ಚೀನಾ ತಂಡ ಯಶಸ್ವಿಯಾಯಿತು.
ಪಾಕಿಸ್ತಾನದ ಕಳಪೆ ಪ್ರದರ್ಶನ
ಪೆನಾಲ್ಟಿ ಶೂಟೌಟ್ನಲ್ಲಿ ಪಾಕಿಸ್ತಾನ ತಂಡ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇತ್ತ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಚೀನಾ ತಂಡ ಎರಡು ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಪೆನಾಲ್ಟಿ ಶೂಟೌಟ್ನಲ್ಲಿ ಗೋಲುಗಳನ್ನು ವಿಫಲಗೊಳಿಸುವ ಸಲುವಾಗಿ ಪಾಕಿಸ್ತಾನ ತಂಡ ಗೋಲ್ಕೀಪರ್ ಅನ್ನು ಬದಲಿಸಿ ಮುನೀಬ್ ಉರ್ ರೆಹಮಾನ್ ಅವರನ್ನು ಗೋಲ್ಕೀಪರ್ನನ್ನಾಗಿ ಮಾಡಿತು. ಆದರೆ ಇದರ ಹೊರತಾಗಿಯೂ, ಚೀನಾ ಚೆಂಡನ್ನು ಎರಡು ಬಾರಿ ಗೋಲಿಗೆ ಪೋಸ್ಟ್ ಮಾಡುವಲ್ಲಿ ಯಶಸ್ವಿಯಾಯಿತು. ಇದೀಗ ಪಾಕಿಸ್ತಾನ ತಂಡ ಫೈನಲ್ ರೇಸ್ನಿಂದ ಹೊರಗುಳಿದಿದ್ದು, ಮೂರನೇ ಸ್ಥಾನಕ್ಕಾಗಿ ಪಂದ್ಯವನ್ನು ಆಡಬೇಕಾಗಿದೆ.
ಪೆನಾಲ್ಟಿ ಶೂಟೌಟ್ನಲ್ಲಿ ಏನಾಯಿತು?
ಪೆನಾಲ್ಟಿ ಶೂಟೌಟ್ನಲ್ಲಿ ಚೀನಾ ಮೊದಲ ಶಾಟ್ನಲ್ಲಿಯೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಇತ್ತ ಪಾಕಿಸ್ತಾನ ಮೊದಲ ಹೊಡೆತದಲ್ಲಿ ಗೋಲು ದಾಖಲಿಸುವಲ್ಲಿ ವಿಫಲವಾಯಿತು. ಇದಾದ ಬಳಿಕ ಎರಡನೇ ಹೊಡೆತದಲ್ಲಿ ಚೀನಾ ಪರ ಲಿನ್ ಚಾಂಗ್ಲಿಯಾಂಗ್ ಎರಡನೇ ಗೋಲು ದಾಖಲಿಸಿದರು. ಆದರೆ ಪಾಕಿಸ್ತಾನ ತನ್ನ ಎರಡನೇ ಪ್ರಯತ್ನದಲ್ಲೂ ಗೋಲು ದಾಖಲಿಸುವಲ್ಲಿ ಎಡವಿತು. ಈ ಮೂಲಕ ಪಾಕ್ ತಂಡ ಫೈನಲ್ಗೇರುವ ಅವಕಾಶದಿಂದ ವಂಚಿತವಾಯಿತು. ಇನ್ನು ಇದೇ ಮೊದಲ ಬಾರಿಗೆ ಫೈನಲ್ಗೇರಿರುವ ಚೀನಾ ತಂಡ, ಇಂದೇ ನಡೆಯುತ್ತಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವಿಜೇತವಾದ ತಂಡವನ್ನು ಫೈನಲ್ನಲ್ಲಿ ಎದುರಿಸಲಿದೆ. ಪ್ರಸ್ತುತ ನಡೆಯುತ್ತಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಕೊರಿಯಾ ತಂಡವನ್ನು ಎದುರಿಸುತ್ತಿದೆ.