ನವದೆಹಲಿ: ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುವ ಜನಗಣತಿಯನ್ನು ಶೀಘ್ರದಲ್ಲೇ ಆರಂಭಿಸಲಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಎನ್ಡಿಎ ಸರ್ಕಾರವುಮೂರನೇ ಅವರಧಿಯಲ್ಲಿ 100 ದಿನಗಳನ್ನು ಪೂರೈಸಿದ ಅಂಗವಾಗಿ ಅಮಿತ್ ಶಾ ಅವರು ಪ್ರಸಾರ ಖಾತೆ ಸಚಿವ ಅಶ್ವಿನಿ ವೃಷ್ಣವ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜನಗಣತಿ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದ ಅವರು, ನಾವು ಜನಗಣತಿಯನ್ನು ಘೋಷಣೆ ಮಾಡಿದಾಗ ಎಲ್ಲಾ ವಿವರಗಳು ಅದರಲ್ಲಿ ಸಿಗಲಿವೆ ಎಂದರು.
ಜನಗಣತಿ ಪ್ರಕ್ರಿಯೆಯನ್ನು ನಡೆಸಲು ಅಂದಾಜು ₹ 12 ಸಾವಿರ ಅಧಿಕ ವೆಚ್ಚವಾಗಬಹುದು. ಈಗ ನಡೆಯಲಿರುವ ಜನಗಣತಿಯು ಪ್ರಥಮ ಡಿಜಿಟಲ್ ಜನಗಣತಿ ಪ್ರಕ್ರಿಯೆಯೂ ಆಗಿರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮನೆಗಳಿಗೆ ತೆರಳಿ, ಜನಗಣತಿಯ ಭರ್ತಿ ಮಾಡುವುದು ಸಹಜ ಪ್ರಕ್ರಿಯೆ. ಸ್ವ-ಸಮಿಕ್ಷೆಗೂ ಜನರಿಗೆ ಅವಕಾಶ ಕಲ್ಪಸಲಾಗುತ್ತಿದ್ದು, ಇದಕ್ಕಾಗಿ ಪೋರ್ಟಲ್ ಲಭ್ಯವಾಗಲಿದೆ. ಅಲ್ಲಿ ಮಾಹಿತಿ ತುಂಬುವವರು ಆಧಾರ್ ಸಂಖ್ಯೆ ಅಥವಾ ಮೊಬೈಲ್ ಫೋನ್ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.
ಜನಗಣತಿ ನೋಂದಣಿ ಪ್ರಧಾನ ಆಯುಕ್ತಾಲಯವು ಜನಗಣತಿ ಪ್ರಕ್ರಿಯೆಗಾಗಿ ಈಗಾಗಲೇ 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಮೊಬೈಲ್ ಫೋನ್, ಇಂಟರ್ನೆಟ್ ಸಂಪರ್ಕವಿದೆಯೇ, ಸ್ಮಾರ್ಟ್ಫೋನ್ ಇದೆಯೇ, ಬೈಸಿಕಲ್, ಸ್ಕೂಟರ್, ಮೊಪೆಡ್ ಇವೆಯೇ, ನಾಲ್ಕುಚಕ್ರದ ವಾಹನವಿದೆಯೇ ಎಂಬ ಪ್ರಶ್ನೆಗಳು ಸೇರ್ಪಡೆಯಾಗಿವೆ.