ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧಿಯಾಗಿರುವ ದರ್ಶನ್ ವಿಚಾರಣಾಧೀನ ಕೈದಿಯಾಗಿ ಬಳ್ಳಾರಿ ಜೈಲು ಸೇರಿದ್ದಾರೆ. ಆರೋಪಿಗಳ ಕಸ್ಟಡಿ ಅಂತ್ಯಗೊಂಡ ಹಿನ್ನೆ ಇಂದು (ಸೆ.17) 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ರು. ವಿಚಾರಣೆ ನಡೆಸಿದ ನ್ಯಾಯಾಧೀಶರು ದರ್ಶನ್ ಆ್ಯಂಡ್ ಗ್ಯಾಂಗ್ಗೆ ಸೆಪ್ಟೆಂಬರ್ 30ರವರೆಗೂ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ನ್ಯಾಯಾಧೀಶರ ವಿಚಾರಣೆ ವೇಳೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಕೈ ಎತ್ತುವ ಮೂಲಕ ಹಾಜರಾತಿ ಖಚಿತಪಡಿಸಿದ್ರು. ದರ್ಶನ್ ಪರ ವಕೀಲರು ವಾದ ಮಾಡುತ್ತಿದ್ದ ವೇಳೆ ನಟಿ ಪವಿತ್ರಾ ಗೌಡ ನ್ಯಾಯಾಧೀಶರಿಗೆ ಏನನ್ನೋ ಹೇಳಲು ಮುಂದಾಗಿದ್ರು. ಈ ವೇಳೆ ನೆಟ್ ವರ್ಕ್ ಸಮಸ್ಯೆಯಿಂದ ಆಡಿಯೋ ಕಟ್ ಆಗಿತ್ತು.
ಮತ್ತೆ ಕನೆಕ್ಟ್ ಮಾಡುವಂತೆ ನ್ಯಾಯಾಧೀಶರು ಹೇಳಿದ್ರು. ವಿಡಿಯೋ ಕನೆಕ್ಟ್ ಆದ ಬಳಿಕ ಪವಿತ್ರಾ ಗೌಡ ಮಾತಾಡಿದ್ರು. ನಮ್ಮ ಕುಟುಂಬಸ್ಥರ ಭೇಟಿಗೆ ಜೈಲಾಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ನ್ಯಾಯಾಧೀಶರ ಬಳಿ ನಟಿ ಪವಿತ್ರಾ ಗೌಡ ನೋವು ತೋಡಿಕೊಂಡಿದ್ದಾರೆ.
ದರ್ಶನ್ ಅಂಡ್ ಗ್ಯಾಂಗ್ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದು, 24 ನೇ ಎಸಿಎಂಎಂ ಕೋರ್ಟ್ನಲ್ಲಿ ನ್ಯಾಯಾಧೀಶರು. ಒಬೊಬ್ಬರ ಹೆಸರನ್ನು ಕರೆದು ಈ ವೇಳೆ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಕೈ ಎತ್ತುವ ಮೂಲಕ ಹಾಜರಾತಿ ಖಚಿತಪಡಿಸಿದ್ದಾರೆ.