ದಿಲ್ಲಿಯ ನೂತನ ಸಿಎಂ ಆಗಿ ಆಯ್ಕೆಯಾಗಿರುವ ಆಪ್ ನಾಯಕಿ ಆತಿಶಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಸೆಪ್ಟೆಂಬರ್ 21 ರಂದು ನಡೆಯಲಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ರಾಷ್ಟ್ರಪತಿ ಮುರ್ಮ ಜೊತೆ ಮಾತುಕತೆ ನಡೆಸಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಅರವಿಂದ್ ಕೇಜ್ರವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಆತಿಶಿರನ್ನು ಸಿಎಂ ಆಗಿ ಆಯ್ಕೆ ಮಾಡಿತ್ತು.
ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಮುಂದಿನ 15 ದಿನದೊಳಗೆ ಸಿಎಂ ಆಗಿದ್ದಾಗ ನೀಡಿರುವ ಸರ್ಕಾರಿ ಸೌಲಭ್ಯ, ಭದ್ರತೆ ಜೊತೆಗೆ ಸಿಎಂ ಬಂಗಲೆ ತೊರೆಯಲಿದ್ದಾರೆ ಎಂದು ಆಪ್ ತಿಳಿಸಿದೆ. ಕೇಜ್ರವಾಲ್ 2 ವಾರದೊಳಗೆ ಫ್ಲಾಗ್ಸ್ಟಾಪ್ 6 ರಸ್ತೆಯಲ್ಲಿರುವ ಬಂಗಲೆಯನ್ನು ಖಾಲಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.