ದಿನದ 24 ಗಂಟೆಯ ಸೋಲಾರ್ EV ಚಾರ್ಜಿಂಗ್ ಸ್ಟೇಷನ್ ಅನ್ನು ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಬೆಸ್ಕಾಂ ನಿರ್ಮಾಣ ಮಾಡಿದೆ. ಇದು ದೇಶದಲ್ಲೇ ಮೊದಲ ಬ್ಯಾಟರಿ ಸ್ಟೋರೆಜ್ ಸೋಲಾರ್ ಇವಿ ಚಾರ್ಜಿಂಗ್ ಸ್ಟೇಷನ್ ಅನ್ನೋ ಕೀರ್ತಿಗೆ ಪಾತ್ರವಾಗಿದೆ.
400 ಕಿಲೊ ವ್ಯಾಟ್ ಸಾಮರ್ಥ್ಯ ಹೊಂದಿರುವ ಇದು ದಿನದ 24 ಗಂಟೆಯೂ ಚಾರ್ಜ್ ಮಾಡಬಹುದಾದ ಸೌರಶಕ್ತಿ ಆಧಾರಿತ ಚಾರ್ಜಿಂಗ್ ಸ್ಟೇಶನ್ ಆಗಿದೆ. ಈ ಚಾರ್ಜಿಂಗ್ ಹಬ್ನಲ್ಲಿ ಏಕಕಾಲಕ್ಕೆ 23 ವಾಹನಗಳಿಗೆ ಚಾರ್ಜ್ ಮಾಡಬಹುದಾಗಿದೆ. ಇದರಲ್ಲಿ 30 ನಿಮಿಷದ ಒಳಗೆ ಚಾರ್ಜ್ ಮಾಡಬಲ್ಲ 20 ಫಾಸ್ಟ್ ಚಾರ್ಜಿಂಗ್ ಪಾಯಿಂಟ್ಗಳ ನಿರ್ಮಾಣ ಮಾಡಲಾಗಿದೆ. 50 KW ಮತ್ತು 30 KW ಸಾಮರ್ಥ್ಯದ ವೇಗದ ಚಾರ್ಜಿಂಗ್ ಪಾಯಿಂಟ್ಗಳ ಇದರಲ್ಲಿದೆ. ಖಾಸಗಿ ಕಂಪನಿಗಳ ಸಹಯೋಗದಲ್ಲಿ ಬೆಸ್ಕಾಂನಿಂದ ಸೋಲಾರ್ ಇವಿ ಹಬ್ ನಿರ್ಮಾಣ ಮಾಡಲಾಗುತ್ತಿದೆ. ಇವಿ ಬಳಸ್ತಿರುವ ಕ್ಯಾಬ್ ಚಾಲಕರು ಹಾಗೂ ಸಾರ್ವಜನಿಕರಿಗೆ ಇದರಿಂದ ಅನುಕೂಲ ಆಗಲಿದೆ.
ಇದು ದೇಶದ ಮೊದಲ ಬಳಕೆ ಮಾಡಿದ ಬ್ಯಾಟರಿಗಳಲ್ಲಿ ಸೌರವಿದ್ಯುತ್ ತುಂಬಿಸಿ 24/7 ಪೂರೈಕೆ ಮಾಡುವ ಚಾರ್ಜಿಂಗ್ ಸ್ಟೇಷನ್ ಆಗಿದೆ. ಬೆಸ್ಕಾಂನ 224 ಕೆವಿ ಪವರ್ ಸ್ಟೇಷನ್ ಜಾಗದಲ್ಲಿ ನಿರ್ಮಾಣವಾಗಿರುವ ಸೋಲಾರ್ ಇವಿ ಚಾರ್ಜಿಂಗ್ ಹಬ್ ಇದಾಗಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಮುಂದಿನ ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕರ ಬಳಕೆಗೆ ಸೋಲಾರ್ EV ಚಾರ್ಜಿಂಗ್ ಸ್ಟೇಷನ್ ತೆರೆಯಲಾಗುತ್ತಿದೆ.
ಚಾರ್ಜಿಂಗ್ ಸ್ಟೇಷನ್ ವಿಶೇಷತೆಗಳೇನು?
400 ಕಿ.ವ್ಯಾ ಸಾಮರ್ಥ್ಯ ಹೊಂದಿದ್ದು, ಒಮ್ಮೆಗೆ 23 ವಾಹನಗಳನ್ನು ಚಾರ್ಜಿಂಗ್ ಮಾಡಬಹುದು
ಫಾಸ್ಟ್ ಚಾರ್ಜಿಂಗ್ ಪಾಯಿಂಟ್ಗಳ ನಿರ್ಮಾಣ
ಇದು ಸೋಲಾರ್ ಇಂಟಿಗ್ರೇಟೆಡ್ ಹೊಂದಿದ್ದು, ತಲಾ ಎರಡು 45 ಕೆ.ವಿ ಸಾಮರ್ಥ್ಯದ 2 ಲೈಫ್ ಬ್ಯಾಟರಿಗಳನ್ನು ಒಳಗೊಂಡಿರಲಿದೆ.
24 ಗಂಟೆಗಳ ಕಾಲ ಇವಿ ಚಾರ್ಜಿಂಗ್ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್ ಸ್ಟೇಷನ್
ಸೌರ ವಿದ್ಯುತ್ ಅನ್ನು ಸ್ಟೋರೆಜ್ ಮಾಡಿ ಇವಿ ವಾಹನಗಳಿಗೆ ಚಾರ್ಜ್ ಮಾಡಲಾಗುತ್ತೆ
ಬಳಸಿದ ಬ್ಯಾಟರಿ ಬಳಕೆ ಹೇಗೆ?
ಈ ಸ್ಟೇಷನ್ನಲ್ಲಿ ಸೋಲಾರ್ನಿಂದ ಬಂದಂತಹ ಸೌರ ವಿದ್ಯುತ್ ಶಕ್ತಿಯ ಶೇಖರಣೆ
ಬಳಸಿದ ಕಾರ್ ಬ್ಯಾಟರಿಗಳಲ್ಲಿ ಶೇಖರಣೆ ಮಾಡಲಾಗುತ್ತೆ
ಹಗಲಿನಲ್ಲಿ ಉತ್ಪಾದಿಸಿ ದಿನದ 24 ಗಂಟೆಯೂ ಇವಿ ವಾಹನಗಳಿಗೆ ಸರಬರಾಜು ಮಾಡಲಾಗುತ್ತೆ
ಬೆಂಗಳೂರಿನಲ್ಲಿ ಇವಿ ಕ್ಯಾಬ್ ಗಣನೀಯ ಏರಿಕೆ..!
ನಗರದಲ್ಲಿ ಕಳೆದೊಂದು ವರ್ಷದಿಂದ ಇವಿ ವಾಹನಗಳ ಸಂಖ್ಯೆ ಹೆಚ್ಚಳ
ಇವಿ ಕ್ಯಾಬ್ಗಳ ಬಳಕೆ ಗಣನೀಯ ಹೆಚ್ಚಳ
ಬೆಂಗಳೂರು ಟು ವಿಮಾನ ನಿಲ್ದಾಣ ಡ್ರಾಪ್ ಪಿಕಪ್ನಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಇವಿ ಕ್ಯಾಬ್ಗಳು
ಸದ್ಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಏಜೆನ್ಸಿಗಳು ತಮ್ಮ ವಾಹನಗಳಿಗೆ ಎರಡು ಚಾರ್ಜಿಂಗ್ ಪಾಯಿಂಟ್ಗಳನ್ನ ನಿರ್ಮಿಸಿವೆ.
ಆದ್ರೆ ಅವುಗಳಲ್ಲಿ ಸಾರ್ವಜನಿಕರ ವಾಹನಗಳ ಚಾರ್ಜಿಂಗ್ಗೆ ಅವಕಾಶ ಇಲ್ಲ
ಇದೀಗ ಬೆಸ್ಕಾಂ ನಿರ್ಮಿಸಿರುವ ಸೋಲಾರ್ ಇವಿ ಚಾರ್ಜಿಂಗ್ ಹಬ್ನಲ್ಲಿ ಸಾರ್ವಜನಿಕರಿಗೂ ಅವಕಾಶ
ಸದ್ಯ ರಾಜ್ಯದಲ್ಲಿ 4.80 ಲಕ್ಷ ಎಲೆಕ್ಟ್ರಿಕ್ ವಾಹನಿಗಳಿವೆ
ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು 5,765 ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್ ಹೊಂದಿದೆ
ಈ ಪೈಕಿ ಬೆಂಗಳೂರಿನಲ್ಲಿ 4,462 ಸ್ಟೇಷನ್ಗಳಿವೆ