ಟೆಲಿಕಾಂ ದರಗಳು ಗಗನಕ್ಕೇರಿವೆ. ಅದರಲ್ಲೂ ಏರ್ಟೆಲ್, ಜಿಯೋ, ವೊಡಾಫೋನ್ ಬಳಕೆದಾರರಿಗೆ ದರ ಬಿಸಿ ಕೈಸುಡುತ್ತಿದೆ. ಇದೇ ಹೊತ್ತಲ್ಲಿ ಹೆಚ್ಚಿನ ಗ್ರಾಹಕರಿಗೆ ತಿಳಿಯದ ಹಣ ಉಳಿಸುವ ಟ್ರಿಕ್ಸ್ ಇವೆ. ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ತಿಂಗಳಿಗೆ ಸಾವಿರ ರೂ ಹಣ ಗಳಿಸುವ ಅವಕಾಶ ಇದೆ. ಏರ್ಟೆಲ್ನ ಮೊಬೈಲ್, ಡಿಟಿಎಚ್, ವೈಫೈ ಇತ್ಯಾದಿ ರೀಚಾರ್ಜ್ಗೆ ಶೇ. 25ರಷ್ಟು ಕ್ಯಾಶ್ ಬ್ಯಾಕ್ ಸಿಗುತ್ತದೆ. ಎಲೆಕ್ಟ್ರಿಸಿಟಿ ಬಿಲ್, ನೀರಿನ ಬಿಲ್ ಕಟ್ಟಿದರೆ ಕ್ಯಾಶ್ ಬ್ಯಾಕ್ ಸಿಗುತ್ತದೆ. ಸ್ವಿಗ್ಗಿ, ಜೊಮಾಟೊ ಇತ್ಯಾದಿಗೆ ಹಣ ಪಾವತಿಸಿದರೂ ಕ್ಯಾಶ್ ಬ್ಯಾಕ್ ಸಿಗುತ್ತದೆ. ಇತರ ಯಾವುದೇ ಪಾವತಿಗೂ ಕ್ಯಾಷ್ಬ್ಯಾಕ್ ಆಫರ್ ಇರುತ್ತದೆ.
ಇದು ಯಾರಿಗಾದರೂ ಅಚ್ಚರಿ ಆಗಬಹುದು. ನೀವು ಭಾವಿಸಿದಂತೆ ಕೆಲ ಷರತ್ತುಗಳೂ ಇಲ್ಲಿ ಅಡಕವಾಗಿವೆ. ಈ ಷರತ್ತಿನ ನಡುವೆಯೂ ಕ್ಯಾಶ್ ಬ್ಯಾಕ್ ಆಫರ್ ಮಹತ್ವದ್ದೇ. ನೀವು ಏರ್ಟೆಲ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರಬೇಕು. ಈ ಕ್ರೆಡಿಟ್ ಕಾರ್ಡ್ ಇದ್ದು ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಸಾಕು ಭರಪೂರ ಕ್ಯಾಶ್ ಬ್ಯಾಕ್ ಮತ್ತಿತರ ಆಫರ್ ಪಡೆಯಬಹುದು.
ಏರ್ಟೆಲ್ ಥ್ಯಾಂಕ್ಸ್ ಆ್ಯಪ್ನಲ್ಲಿ ನೀವು ಏರ್ಟೆಲ್ ಎಕ್ಸಿಸ್ ಕ್ರೆಡಿಟ್ ಕಾರ್ಡ್ ಮೂಲಕ ವಿವಿಧ ಸೇವೆಗಳಿಗೆ ಹಣ ಪಾವತಿಸಿದರೆ ಕ್ಯಾಶ್ ಬ್ಯಾಕ್, ಕಾಂಪ್ಲಿಮೆಂಟರಿ ವೋಚರ್ಸ್ ಇತ್ಯಾದಿ ಪಡೆಯಬಹುದು. ಯಾವ್ಯಾವುದಕ್ಕೆ ಎಷ್ಟು ಕ್ಯಾಶ್ ಬ್ಯಾಕ್ ಸಿಗುತ್ತೆ ಎಂಬುದರ ವಿವರ ಈ ಕೆಳಗಿನ ಪಟ್ಟಿಯಲ್ಲಿದೆ ನೋಡಿ:
- ಏರ್ಟೆಲ್ ಮೊಬೈಲ್, ಡಿಟಿಎಚ್, ಬ್ರಾಡ್ಬ್ಯಾಂಡ್, ವೈಫೈ ಸೇವೆಗೆ ಹಣ ಪಾವತಿ: ಶೇ. 25 ಕ್ಯಾಶ್ ಬ್ಯಾಕ್ (ಗರಿಷ್ಠ ತಿಂಗಳಿಗೆ 250 ರೂ)
- ಎಲೆಕ್ಟ್ರಿಸಿಟಿ, ಗ್ಯಾಸ್, ನೀರಿನ ಬಿಲ್: ಶೇ. 10ರಷ್ಟು ಕ್ಯಾಶ್ ಬ್ಯಾಕ್ (ತಿಂಗಳಿಗೆ ಗರಿಷ್ಠ 250 ರೂ)
- ಸ್ವಿಗ್ಗಿ, ಜೊಮಾಟೊ, ಬಿಗ್ ಬ್ಯಾಸ್ಕೆಟ್ಗೆ ಹಣ ಪಾವತಿ: ಶೇ. 10ರಷ್ಟು ಕ್ಯಾಶ್ ಬ್ಯಾಕ್ (ತಿಂಗಳಿಗೆ ಗರಿಷ್ಠ 500 ರೂ)
- ಇತರ ಯಾವುದೇ ಪಾವತಿಗೆ ಶೇ. 1ರಷ್ಟು ಕ್ಯಾಶ್ ಬ್ಯಾಕ್
- ಉಚಿತ ಏರ್ಪೋರ್ಟ್ ಲಾಂಜ್ ಸೌಲಭ್ಯ: ವರ್ಷಕ್ಕೆ ನಾಲ್ಕು ಬಾರಿ
- ಇಲ್ಲಿ ನೀವು ಏರ್ಟೆಲ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಡೆದು 30 ದಿನದೊಳಗೆ ಆ್ಯಕ್ಟಿವೇಶನ್ ಮಾಡಿದರೆ 500 ರೂ ಮೊತ್ತದ ಅಮೇಜಾನ್ ವೋಚರ್ ಅನ್ನು ಗಿಫ್ಟ್ ಆಗಿ ನೀಡಲಾಗುತ್ತದೆ. ನೀವು ಅಮೇಜಾನ್ನಲ್ಲಿ ಮಾಡುವ ಖರೀದಿಗೆ ಈ ವೋಚರ್ ಮೂಲಕ 500 ರೂ ಡಿಸ್ಕೌಂಟ್ ಪಡೆಯಬಹುದು.