ಶಿಖರ್ ಧವನ್ ಕಳೆದ ತಿಂಗಳು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ರು. ಫುಲ್ ಫಿಟ್ & ಫೈನ್ ಆಗಿದ್ರೂ ಧವನ್ ದಿಢೀರನೆ ವಿದಾಯ ಘೋಷಿಸಿದರು. ಇದರ ಹಿಂಹಿನ ಅಸಲಿ ಕಾರಣವೇನು?
ಎಷ್ಟೇ ವರ್ಷಗಳ ಕಾಲ ಕ್ರಿಕೆಟ್ ಅನ್ನೋ ರನ್ ಭೂಮಿಯಲ್ಲಿ, ದಿಗ್ಗಜನಾಗಿ ವಿಜೃಂಭಿಸಿದ್ರು, ಒಂದಿಲ್ಲ ಒಂದು ದಿನ ವಿದಾಯ ಘೋಷಿಸಲೇಬೇಕು. ಅಂತಹದೇ ವಿದಾಯಕ್ಕೆ ಟೀಮ್ ಇಂಡಿಯಾ ಸ್ಟಾರ್ ಓಪನರ್ ಶಿಖರ್ ಧವನ್ ಸಾಕ್ಷಿಯಾಗಿದ್ರು. ಕಳೆದ ತಿಂಗಳು ಗಬ್ಬರ್ ಸಿಂಗ್ ದಿಢೀರ್ ಎಂದು ನಿವೃತ್ತಿ ಘೋಷಿಸಿ 12 ವರ್ಷಗಳ ಕ್ರಿಕೆಟ್ ಬದುಕಿಗೆ ಅಂತ್ಯ ಹಾಡಿದರು. ಮನೋಜ್ಞ ಆಟದಿಂದ ಯುವ ಕ್ರಿಕೆಟರ್ಸ್ಗೆ ಸ್ಫೂರ್ತಿಯಾಗಿದ್ದ ಧವನ್ ದಿಢೀರ್ ಗುಡ್ಬೈ ಹೇಳಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿತ್ತು. ಇದೀಗ ತಾನೇಕೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದೆ ಅನ್ನೋದನ್ನ ಧವನ್ ಬಹಿರಂಗಗೊಳಿಸಿದ್ದಾರೆ.
ಧವನ್ಗೆ 2 ವರ್ಷದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನವಿರಲಿಲ್ಲ. ಆಡುವ ಛಲ, ಫಿಟ್ನೆಸ್ ಇದ್ರೂ ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿತು. ಇನ್ನೊಂದೆಡೆ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಘಟಿಸಿದವು. ಪತ್ನಿ ಆಯೆಷಾ ಮುಖರ್ಜಿ ಅವರಿಗೆ ವಿಚ್ಛೇದನ ನೀಡಿದರು. ಮಗ ಝೊರಾವೆರ್ ಕೂಡ ತಂದೆ ಧವನ್ರಿಂದ ದೂರವಾದರು. ಇದರಿಂದ ಶಿಖರ್ ಮಾನಸಿಕವಾಗಿ ನೊಂದಿದ್ದರು.
ಇಂತಹ ಟೈಮ್ನಲ್ಲಿ ಧವನ್ಗೆ ಟೀಮ್ ಇಂಡಿಯಾಗೆ ಮರಳಲು ಇದ್ದ ಒಂದೇ ದಾರಿ ಅಂದ್ರೆ ಡೊಮೆಸ್ಟಿಕ್ ಕ್ರಿಕೆಟ್ ಆಡೋದು. ಆದರೆ ಡೊಮೆಸ್ಟಿಕ್ ಕ್ರಿಕೆಟ್ ಆಡುವ ಮನಸ್ಸು ಮಾಡಲಿಲ್ಲ. ಯಾಕಂದ್ರೆ ಸ್ಫೂರ್ತಿ ತುಂಬುವವರೇ ಇರಲಿಲ್ಲ. ಹೀಗಾಗಿಯೇ ನಾನು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದೆ ಎಂದು ಶಿಖರ್ ಧವನ್ ಹೇಳಿದ್ದಾರೆ.