ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜೊತೆ ಅವರ ಪುತ್ರಿ ಆರಾಧ್ಯ ಬಚ್ಚನ್ ಕೂಡ ಎಲ್ಲರಿಗೂ ಚಿರಪರಿಚಿತ. ಇವರಿಗೆ ಕೂಡ ಸಾಕಷ್ಟು ಫ್ಯಾನ್ ಫಾಲೋವರ್ಸ್ ಇದ್ದಾರೆ. ಆರಾಧ್ಯ ಒಂದು ಫೋಟೋ ಹಂಚಿಕೊಂಡರೆ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದರಂತೆ ಇದೀಗ ಆರಾಧ್ಯ ಎಂದು ಹೇಳಲಾಗುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಆರಾಧ್ಯ ಅವರು ಹಸಿರು ಬಣ್ಣದ ಕ್ರಾಪ್ ಟಾಪ್ ಮತ್ತು ಸ್ಕರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಎನ್ಎಸ್ಎಸ್ ನೀರಜ್ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದು, ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, “ಈಗ ಆರಾಧ್ಯ ಕೂಡ ಐಶ್ವರ್ಯಾ ರೈ ಅವರೊಂದಿಗೆ ಸೌಂದರ್ಯದಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದ್ದಾರೆ. ಐಶ್ವರ್ಯಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ, ತಾಯಿ ಮತ್ತು ಮಗಳು ಇಬ್ಬರೂ ಮ್ಯಾಚಿಂಗ್ ಕಪ್ಪು ಡ್ರೆಸ್ಗಳನ್ನು ಧರಿಸಿದ್ದರು. ಆದರೆ ಇಲ್ಲಿ ಜನರು ಐಶ್ವರ್ಯಾಳನ್ನು ಪಕ್ಕಕ್ಕಿಟ್ಟು ಆರಾಧ್ಯರನ್ನೇ ನೋಡಿದರು. ಇವರ ಮುದ್ದು ಮುಗುಳ್ನಗೆ ಮತ್ತು ಮುಖ ನೋಡಿದ ಜನರು ಭವಿಷ್ಯದಲ್ಲಿ ಬಾಲಿವುಡ್ನ ದೊಡ್ಡ ನಾಯಕಿಯಾಗುತ್ತಾರೆ ಎಂದು ಈಗಾಗಲೇ ಊಹಿಸಲು ಪ್ರಾರಂಭಿಸಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವೈರಲ್ ಫೋಟೋ ಆರಾಧ್ಯ ಬಚ್ಚನ್ ಅವರದ್ದಲ್ಲ, ಇದನ್ನು ಎಡಿಟ್ ಮಾಡಲಾಗಿದೆ. ನಟಿ ಮತ್ತು ರೂಪದರ್ಶಿ ಮೇಘಾ ಶುಕ್ಲಾ ಅವರ ಫೋಟೋವನ್ನು ಎಡಿಟ್ ಮಾಡಲಾಗಿದ್ದು, ಆರಾಧ್ಯ ಬಚ್ಚನ್ ಅವರ ಮುಖವನ್ನು ಅವರ ಮುಖದ ಮೇಲೆ ಹೇರಲಾಗಿದೆ. ನಟಿ ಮೇಘಾ ಶುಕ್ಲಾ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು 26 ಏಪ್ರಿಲ್ 2024 ರಂದು ಅಪ್ಲೋಡ್ ಮಾಡಿದ್ದಾರೆ..