ಕಿಚ್ಚನ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮ ಭಾರೀ ಕುತೂಹಲತೆಯಿಂದ ಸಾಗುತ್ತಿದೆ. 17 ಜನರು ದೊಡ್ಮನೆಯಲ್ಲಿದ್ದಾರೆ. ರಿಯಲ್ ಫೈಟ್ ಶುರುವಾಗಿದೆ. ಇದರ ಜೊತೆಗೆ ಬಿಗ್ ಬಾಸ್ ಟಾಸ್ಕ್ವೊಂದನ್ನು ಕೊಟ್ಟಿದ್ದು, ಟಾಸ್ಕ್ ವೇಳೆ ಸ್ಪರ್ಧಿಗಳ ಗೆಲುವಿನ ಹೋರಾಟದ ನಡುವೆ ಗಾಯಗಳಾಗಿದೆ. ಈ ವೇಳೆ ಕೆಲವರು ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ ಚೆಂಡಿನ ಟಾಸ್ಕ್ ಕೊಟ್ಟಿದ್ದು, ಈ ವೇಳೆ ಚೆಂಡು ಉಳಿಸಲು ಹೋರಾಡುವಾಗ ಗಾಯ ಮಾಡಿಕೊಂಡಿದ್ದಾರೆ. ಕೆಲವು ಸ್ಪರ್ಧಿಗಳು ನೋವಿನಿಂದ ಕಣ್ಣೀರು ಹಾಕಿದ್ದಾರೆ. ಅತ್ತ ನಟ ಶಿಶಿರ್ಗೆ ಗಾಯವಾಗಿದೆ. ನಟಿ ಭವ್ಯಾ, ಮಾನಸಾ ನೋವಿನಿಂದ ಕಣ್ಣೀರು ಹಾಕಿದ್ದಾರೆ.
ಅಂದಹಾಗೆಯೇ ಇಂದಿನ ಎಪಿಸೋಡ್ ಭಾರೀ ಕುತೂಹಲತೆಯಿಂದ ಕೂಡಿದೆ. ಟಾಸ್ಕ್ ವೇಳೆ ಎರಡು ತಂಡಗಳ ನಡುವೆ ಜಟಾಪಟಿ ನಡೆದಿದೆ. ಆದರೆ ಗೆಲುವು ಯಾರ ಪಾಲಾಗಿದೆ ಎಂದು ತಿಳಿಯಬೇಕಾದರೆ ಇಂದಿನ ಎಪಿಸೋಡ್ ವೀಕ್ಷಿಸಬೇಕಿದೆ.