ಬಿಗ್ಬಾಸ್ ಕನ್ನಡ 11 ಶುರುವಾಗಿ ಇವತ್ತಿಗೆ ಒಂದು ವಾರ ಕಳೆದಿದೆ. ಶಾಂತವಾಗಿದ್ದ ಮನೆ ಈಗ ದಿಢೀರನೇ ಸದ್ದು ಮಾಡುತ್ತಿದೆ. ಇಂದು ಶನಿವಾರ ಬಿಗ್ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳ ಲೆಕ್ಕಾಚಾರ ಮಾಡುವ ದಿನ. ಅಂದರೆ ಕಿಚ್ಚನ ಪಂಚಾಯತಿ ನಡೆಯುವ ದಿನವಾಗಿದೆ. ಅನೇಕ ತಪ್ಪು ಸರಿಗಳನ್ನ ತಿದ್ದಿ ಹೇಳುವ ಹಾಗೂ ಅತಿಯಾದ ವರ್ತನೆ ತೋರಿದ ಹಲವರಿಗೆ ಕ್ಲಾಸ್ ತೆಗೆದುಕೊಳ್ಳುವ ದಿನವಾಗಿದೆ.
ಹೌದು ಇಂದು ಬಿಗ್ಬಾಸ್ ಮನೆಗೆ ಕಿಚ್ಚನ ಪಂಚಾಯ್ತಿ ಕಿಚ್ಚನ್ನ ತಂಪೆರೆಯುತ್ತಾ? ನಾಮಿನೇಟ್ ಆಗಿರುವ ಸ್ಫರ್ಧಿಗಳಲ್ಲಿ ಮನೆಯಲ್ಲಿ ಉಳಿಯುವವರು ಯಾರು, ಹೊರ ಹೋಗುವವರು ಯಾರು? ಎಂಬ ಕುತೂಹಲಕ್ಕೆ ತೆರೆ ಬೀಳುವ ಕಾಲ ಸನ್ನಿಹಿತವಾಗಿದೆ. ಹಾಗಾದ್ರೆ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತೆ, ಮರ್ಮದ ಏಟು ಯಾರಿಗೆ ಬೀಳುತ್ತೆ ಕಾದು ನೋಡಬೇಕಿದೆ.
ಕಳೆದ ಸೀಸನ್ಗೆ ಹೋಲಿಕೆ ಮಾಡಿದ್ರೆ ಈ ಸೀಸನ್ನಲ್ಲಿ ಇರುವ ಎಲ್ಲರೂ ಕೂಡ ಜಗಳಾ ಮಾಡೋಕೆ ಬಂದಿರೊ ರೀತಿ ಕಾಣಿಸುತ್ತಿದೆ ಅಂತಾ ವೀಕ್ಷಕರು ಚರ್ಚೆ ಮಾಡ್ತಿದ್ದಾರೆ. ಇದೆಲ್ಲದರ ನಡುವೆ ತಪ್ಪು ಮಾಡಿದ, ತಪ್ಪಾಗಿ ಮಾತನಾಡಿದ ಕೆಲವು ಸ್ಪರ್ಧಿಗಳಿಗೆ ಸಹಜವಾಗಿಯೇ ತಳಮಳ ಶುರುವಾಗಿದೆ. ಕಿಚ್ಚ ಸುದೀಪ್ ಎಲ್ಲಿ ಮುಖವಾಡ ಕಳಚಿಡುತ್ತಾರೋ ಎಂಬ ಭಯ ಸ್ಪರ್ಧಿಗಳಲ್ಲಿ ಕಾಡಿದೆ. ಸ್ವರ್ಗ ಇರಲಿ, ನರಕಾನೇ ಇರಲಿ ಎಲ್ಲಿದ್ದರೂ ಎಲಿಮಿನೇಷನ್ ತಪ್ಪಿದ್ದಲ್ಲ. ಈ ಎರಡು ಟೀಂಗಳ ಮಧ್ಯೆ ಪೈಪೋಟಿ ಜೋರಾಗಿ ನಡಿತಿದೆ. ಈ ವಾರ ಮನೆಯಿಂದ ಆಚೆ ಹೋಗಲು 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಯಾರು ಮನೆಯಲ್ಲಿ ಇರ್ತಾರೆ, ಯಾರು ಆಚೆ ಹೋಗ್ತಾರೆ ಎಂಬುದು ಕುತೂಹಲ ಮೂಡಿಸಿದೆ.