ಕೃಷಿ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 4 ಜನ ಮೃತ ಪಟ್ಟಿರುವ ಘಟನೆ ತೆಲಂಗಾಣ ಗಡಿಯ ಗಣೀಶಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೈದರಬಾದ್ನಿಂದ ಬೀದರ್ ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ಗೆ ಬೈಕ್ ಡಕ್ಕಿ ಹೊಡೆದಿದೆ. ಮೃತರು ರೇಣುಕಾ(33), ಜಗನ್ನಾಥ್ (38), ವಿನೋದ್ (15) ಹಾಗೂ ಸಿದ್ರಾಮ್ (72) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡಿ ಮನೆ ಕಡೆ ಹೊರಟಿದ್ದ ವೇಳೆ ರಸ್ತೆ ದಾಟುತ್ತಿದ್ದಾಗ ಬೈಕ್ಗೆ ಬಸ್ ಡಿಕ್ಕಿಹೊಡೆದಿದೆ. ಮೃತರ ಶವವನ್ನು ಬೀದರ್ನ ಬೀಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದ ಬಳಿಕ ಬಸ್ ಬಿಟ್ಟು ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ.