ಒಂದೇ ವಾರದಲ್ಲಿ ತಮಿಳುನಾಡಿನಲ್ಲಿ ಮೂರು ದುರಂತ ಸಂಭವಿಸಿರೋದು ವಿಪರ್ಯಾಸವೇ ಸರಿ. ಮೊನ್ನೆ ಏರ್ ಶೋ ವೇಳೆ ಕಾಲ್ತುಳಿತದಿಂದ 5 ಮಂದಿ ಸಾವನ್ನಪ್ಪಿದ್ರು. ಮಧ್ಯಾಹ್ನ ಏರ್ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್ ಆಗಿ ಮಹಾ ದುರಂತ ತಪ್ಪಿತ್ತು. ಈಗ ಪ್ಯಾಸೆಂಜರ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ, ಇದು ಎದೆ ಬಡಿತ ಹೆಚ್ಚಿಸಿದೆ.
ತಮಿಳುನಾಡಿನ ತಿರುವಳ್ಳೂರು ಬಳಿ ನಿಂತಿದ್ದ ಗೂಡ್ಸ್ ಟ್ರೇನ್ಗೆ ಡಿಕ್ಕಿಹೊಡೆದ ಪ್ಯಾಸೆಂಜರ್ ರೈಲು ಮೈಸೂರಿಂದ 10.30ಕ್ಕೆ ಹೊರಡಬೇಕಿತ್ತು. ನಾಲ್ಕು ನಿಮಿಷ ತಡವಾಗಿ 10.34ಕ್ಕೆ ಹೊರಟಿದೆ. ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ಬಂದಿತ್ತು. ಅಲ್ಲಿಂದ ಹೊರಟ ರೈಲು ರಾತ್ರಿ 8.30ರ ಸುಮಾರಿಗೆ ಹೊರಟ ರೈಲು ಡಿಕ್ಕಿಯಾದ ರಭಸಕ್ಕೆ ಮೈಸೂರು-ದರ್ಭಾಂಗ್ ಎಕ್ಸ್ 2 ಬೋಗಿಗಳಿಗೆ ಬೆಂಕಿ ತಗುಲಿದ್ದು, ಸುಟ್ಟು ಭಸ್ಮವಾಗಿದೆ.
ಕರ್ನಾಟಕದಿಂದ 1 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು, ಬೆಂಗಳೂರಿನಿಂದ ನಾಗಪುರಕ್ಕೆ ಹೊರಟ್ಟಿದ್ದ 45 ಮಂದಿ ಕನ್ನಡಿಗರು ಅಪಘಾತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ 3 ಬೋಗಿಗಳು ಹೊತ್ತಿ ಉರಿದು, 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. 6 ಬೋಗಿಗಳು ಹಳಿ ತಪ್ಪಿರುವ ಮಾಹಿತಿ ಸಿಕ್ಕಿದೆ. ಅವಘಡದಿಂದ ಪಾರಾಗಲು ಜನರು ರೈಲಿನ ಕಿಟಕಿಯಿಂದ ಹೊರ ಬಂದಿದ್ದಾರೆ. ಅಪಘಾತ ಸ್ಥಳಕ್ಕೆ ವೈದ್ಯಕೀಯ ಸಿಬ್ಬಂದಿ, ರೈಲ್ವೇ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯ ರಾತ್ರಿಯಿಡಿ ನಡೆದಿದೆ. ತಮಿಳುನಾಡು ಸರ್ಕಾರದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಈ ದುರಂತದ ಬಳಿಕ ಎರಡೂ ದಿಕ್ಕಿನ ಎಲ್ಲಾ ರೈಲು ಸಂಚಾರ ಸ್ಥಗಿತವಾಗಿದೆ. ದಕ್ಷಿಣ ರೈಲ್ವೆಯ ಹಿರಿಯ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ. ಸೇಫ್ ಅಗಿರುವವರಿಗೆ ಫುಡ್ ಸಪ್ಲೈ.. ಗಾಯಗೊಂಡವರನ್ನ ಆಸ್ಪತ್ರೆಗೆ.. ಅಂತಾ ತಮಿಳುನಾಡು ಸರ್ಕಾರದಿಂದ ಬೆಂಬಲ ನೀಡಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿ ತಮಿಳುನಾಡಿನ ಸಿಎಂ ಎಂ.ಕೆ ಸ್ಟಾಲಿನ್ ಮಾಹಿತಿ ನೀಡಿದ್ದಾರೆ.