ಟಾಕ್ಸಿಕ್.. ಟೈಟಲ್ ನಿಂದಲೇ ಅತೀವ ನಿರೀಕ್ಷೆ ಮೂಡಿಸಿದ್ದ ಸಿನಿಮಾ. ಕೆಜಿಎಫ್ ಸಿನಿಮಾಗಳ ಬಳಿಕ ರಾಕಿಭಾಯ್ ನಟಿಸ್ತಿರೋ ಈ ಸಿನಿಮಾದ ಗ್ಲಿಂಪ್ಸ್ ಇತ್ತೀಚೆಗೆ ಯಶ್ ಬರ್ತ್ ಡೇ ಪ್ರಯುಕ್ತ ರಿವೀಲ್ ಆಗಿತ್ತು. ಹಾಲಿವುಡ್ ಸ್ಟಾಂಡರ್ಡ್ ಮೂವಿ ಆಗಿರೋ ಟಾಕ್ಸಿಕ್ ಗೆ ಮಲಯಾಳಂನ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಯಶ್ ಹೋಮ್ ಬ್ಯಾನರ್ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಕೂಡ ಬಂಡವಾಳ ಹೂಡಿದೆ.
ಡ್ರಗ್ ಮಾಫಿಯಾ ಕುರಿತ ಈ ಸಿನಿಮಾದಲ್ಲಿ ಯಶ್ ಸಖತ್ ಸ್ಟೈಲಿಶ್ ಲುಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ, ಟೊವಿನೋ ಥಾಮಸ್, ಹುಮಾ ಖುರೇಷಿ, ಕಿಯಾರಾ ಅಡ್ವಾನಿ, ಬಾಸಿಲ್ ಜೋಸೆಫ್, ಅಚ್ಯುತ್, ತಾರಾ ಸುತಾರಿಯಾ, ಅಮಿತ್ ತಿವಾರಿ ಹೀಗೆ ಬಹುದೊಡ್ಡ ತಾರಾಗಣವಿರೋ ಈ ಸಿನಿಮಾದ ಬಜೆಟ್ ಹೆಚ್ಚೂ ಕಡಿಮೆ ಸಾವಿರ ಕೋಟಿ ಎನ್ನಲಾಗ್ತಿದೆ.
ಇದೆಲ್ಲಾ ಗೊತ್ತಿರೋ ವಿಷಯಗಳೇ ಆದ್ರೂ ಸಹ, ಸಿನಿಮಾದ ಶೂಟಿಂಗ್ ಬೆಂಗಳೂರು, ಮುಂಬೈ, ಗೋವಾ, ತೂತುಕುಡಿ, ಜೈಪುರ್ ಹೀಗೆ ಸಾಕಷ್ಟು ತಾಣಗಳಲ್ಲಿ ಭರದಿಂದ ಸಾಗ್ತಿದೆ. 450 ಮಂದಿ ಕಲಾವಿದರಿರೋ ಟಾಕ್ಸಿಕ್ ಸೆಟ್ ನಲ್ಲಿ ಪ್ರತೀ ದಿನ ಕನಿಷ್ಟ ಸಾವಿರ ಮಂದಿ ಕೆಲಸ ಮಾಡ್ತಿರೋದು ಇಂಟ್ರೆಸ್ಟಿಂಗ್.
ಅಂದಹಾಗೆ ಟಾಕ್ಸಿಕ್ ಸೆಟ್ ನಿಂದ ಬಂದಿರೋ ಲೇಟೆಸ್ಟ್ ಖಬರ್ ಏನಪ್ಪಾಂದ್ರೆ, ಈ ಸಿನಿಮಾ ಕನ್ನಡದ ಜೊತೆ ಜೊತೆಗೆ ಇಂಗ್ಲಿಷ್ ಭಾಷೆಯಲ್ಲೂ ತಯಾರಾಗ್ತಿದೆ. ಹೌದು.. ಒಟ್ಟೊಟ್ಟಿಗೆ ಎರಡೆರಡು ಭಾಷೆಯಲ್ಲಿ ತಯಾರಾಗ್ತಿರೋ ಸಿನಿಮಾ ಅನಿಸಿಕೊಂಡಿದೆ. ಇಂತಹ ಬಿಗ್ ಸ್ಕೇಲ್ ಸಿನಿಮಾ ಕನ್ನಡದ ಜೊತೆ ಆಂಗ್ಲ ಭಾಷೆಯಲ್ಲೂ ತಯಾರಾಗ್ತಿರೋದು ಇದೇ ಮೊದಲು. ಇದನ್ನ ಸ್ವತಃ ಚಿತ್ರತಂಡವೇ ಅಫಿಶಿಯಲಿ ಅನೌನ್ಸ್ ಮಾಡಿದೆ.
ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿಸಲು ಇಂಟರ್ ನ್ಯಾಷನಲ್ ಹಾಲಿವುಡ್ ಸಿನಿಮಾಗಳ ಖ್ಯಾತಿಯ ಕಂಪೆನಿ ಮುಂದಾಗಿದ್ದು ಎಲ್ಲರಿಗೂ ಗೊತ್ತೇಯಿದೆ. ಮಿಗಿಲಾಗಿ ಈ ಟಾಕ್ಸಿಕ್ ಚಿತ್ರಕ್ಕಾಗಿ ಸಾಕಷ್ಟು ಮಂದಿ ಹಾಲಿವುಡ್ ಟೆಕ್ನಿಷಿಯನ್ಸ್ ಕೂಡ ಕೆಲಸ ಮಾಡ್ತಿದ್ದು, ಔಟ್ ಪುಟ್ ಥೇಟ್ ಹಾಲಿವುಡ್ ಸಿನಿಮಾಗಳನ್ನ ಮೀರಿಸೋ ರೇಂಜ್ ಗೆ ಇರಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸದಾ ಒಂದಿಲ್ಲೊಂದು ದಾಖಲೆ ಬರೆಯೋ ಯಶ್, ಈ ಚಿತ್ರದ ಮೂಲಕ ಮತ್ತೊಂದು ಐತಿಹಾಸಿಕ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದ್ದಾರೆ.